ಪ್ರತಿದಿನ ಎಸಿಯಲ್ಲಿ ಕಾಲ ಕಳೆಯುವವರಿಗೆ ಈ ಅಪಾಯ ತಪ್ಪಿದ್ದಲ್ಲ

ಮಂಗಳವಾರ, 19 ಜೂನ್ 2018 (16:31 IST)
ಇತ್ತೀಚಿನ ದಿನಗಳಲ್ಲಿ ಜನರು ಎಸಿಯನ್ನು ಹೆಚ್ಚಾಗಿ ಬಳಸುತ್ತಾರೆ. ದಿನದ ಬಹುತೇಕ ಹೊತ್ತನ್ನು ಎಸಿಯಲ್ಲೇ ಕಳೆಯುತ್ತಾರೆ. ಇದಕ್ಕೆ ವಾತಾವರಣದಲ್ಲಿ ಹೆಚ್ಚಾದ ತಾಪಮಾನ ಏರಿಕೆ ಕಾರಣವಾದರೂ ಕೂಡ ಈ ಎಸಿ ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ ಎಂಬುದನ್ನು ಮಾತ್ರ ಮರೆಯಬೇಡಿ.
ಹೌದು. ದಿನವಿಡಿ ಎಸಿಯಲ್ಲಿ ಕುಳಿತು ಕಾಲಕಳೆಯುವವರಿಗೆ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ
 
* ಎಸಿಯಲ್ಲಿ ಗಾಳಿಯಿಂದ ಹರಡುವ ಕಾಯಿಲೆಗಳು ಹೆಚ್ಚಾಗುವುದು. ಎಸಿ ಹಾಕಿದ ಕಡೆ ಫ್ರೆಶ್‌ ಗಾಳಿ ಬರುವುದಕ್ಕೆ ಅವಕಾಶವಿರುವುದಿಲ್ಲ, ಕೊಠಡಿಯೊಳಗೆ ಅದೇ ಗಾಳಿ ತಿರುಗಾಡುವುದರಿಂದ ಒಬ್ಬರ ವೈರಲ್‌ ಫೀವರ್ (ಜ್ವರ) ಬೇಗನೆ ಇತರರಿಗೆ ಹರಡುವುದು. 
 
* ಕೆಲವರಿಗೆ ಎಸಿಯಲ್ಲಿ ತುಂಬಾ ಹೊತ್ತು ಕೂತರೆ ತಲೆಸುತ್ತು,ತಲೆನೋವು ಈ ರೀತಿಯ ಸಮಸ್ಯೆ ಕಂಡುಬರುವುದು. ಶುದ್ಧಗಾಳಿಯ ಕೊರತೆಯಿಂದಾಗಿ ಈ ರೀತಿಯ ಸಮಸ್ಯೆ ಕಂಡುಬರುವುದು. 
 
* ತುಂಬಾ ಹೊತ್ತು ಎಸಿಯಲ್ಲಿ ಕೂತರೆ ತ್ವಚೆಯ ಹೊಳಪು ಕಡಿಮೆಯಾಗಿ, ಡ್ರೈಯಾಗುವುದು. ಅಲ್ಲದೆ ಕೂದಲಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 
 
* ಕೆಲವರಿಗೆ ಕಣ್ಣು ಉರಿ, ಕಣ್ಣಿನಲ್ಲಿ ನೀರು ಬರುವುದು ಈ ರೀತಿಯ ಸಮಸ್ಯೆ ಕಂಡು ಬರುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ