ಮುಖವನ್ನು ಮೊಡವೆಗಳಿಂದ ಕಾಪಾಡಲು ಹೆಸರುಕಾಳಿನ ಫೇಸ್ ಪ್ಯಾಕ್ ಹಚ್ಚಿ
ಗುರುವಾರ, 24 ಅಕ್ಟೋಬರ್ 2019 (08:44 IST)
ಬೆಂಗಳೂರು : ಹೆಸರು ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾತ್ರವಲ್ಲ ಇದರಿಂದ ಮೊಡವೆ ಸಮಸ್ಯೆಗಳನ್ನು ಸಹ ನಿವಾರಿಸಿಕೊಳ್ಳಬಹುದು. ಇದರಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿರುವುದರಿಂದ ಇದು ಚರ್ಮವನ್ನುತುಂಬಾ ಉತ್ತಮವಾಗಿದೆ.
ಅರ್ಧ ಚಮಚ ಹೆಸರು ಕಾಳಿನ ಪುಡಿ ಮತ್ತು 1 ಚಮಚ ಜೇನುತುಪ್ಪ ಸೇರಿಸಿ ಮಿಶ್ರಣ ತಯಾರಿಸಿಕೊಂಡು ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಮುಖದಲ್ಲಿ ಮೊಡವೆಗಳು ಮೂಡುವುದಿಲ್ಲ.