ಮೂಗು ಸೋರುವ ಸಮಸ್ಯೆ ನಿವಾರಿಸಲು ಈ ಎಣ್ಣೆಯನ್ನು ಹಚ್ಚಿ

ಸೋಮವಾರ, 24 ಫೆಬ್ರವರಿ 2020 (06:07 IST)
ಬೆಂಗಳೂರು : ಕೆಲವರಿಗೆ ಕೆಲವೊಮ್ಮೆ ಮೂಗು ಸೋರುತ್ತಿರುತ್ತದೆ. ಅಲ್ಲದೇ ಮೂಗು ಸೋರುವುದನ್ನು ಆಗಾಗ ಒರೆಸಿಕೊಳ‍್ಳುವುದರಿಂದ ಮೂಗಿನ ಕೆಳಗೆ ಗಾಯವಾಗಿರುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಎಣ್ಣೆಯನ್ನು ಹಚ್ಚಿ.

ಬಾಣಲೆಯಲ್ಲಿ 2-3 ಚಮಚ ಕೊಬ್ಬರಿ ಎಣ್ಣೆ ಬಿಸಿ ಮಾಡಿಕೊಳ್ಳಿ. ಅದಕ್ಕೆ 2 ಚಮಚ ಅಕ್ಕಿ,  3-4 ನಾಟಿ ವೀಳ್ಯದೆಲೆ ತೊಟ್ಟು, 4 ಕಾಳುಮೆಣಸು, ½ ಇಂಚು ಅರಶಿನ ಕೊಂಬು ಇವಿಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷ ಬಿಸಿ ಮಾಡಿ, ಬಳಿಕ ಅದನ್ನು ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಇದನ್ನು ರಾತ್ರಿ ಮಲಗುವ ವೇಳೆ ಮೂಗಿನ 2 ರಂಧ್ರಗಳಿಗೆ ಹಾಕಿ ಹಾಗೇ ಮೂಗಿನಲ್ಲಿ ಹುಣ್ಣಾಗಿದರೆ ಅದಕ್ಕೆ ಹಾಕಿದರೆ ಅದು ಬೇಗ ವಾಸಿಯಾಗುತ್ತದೆ.  ಇದನ್ನು 1 ವರ್ಷದ ಮೂಗಿನಿಂದ ಹಿಡಿದು ಎಲ್ಲರೂ ಬಳಸಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ