ಬಿಸಿಲಿನಿಂದ ಮುಖದ ಚರ್ಮ ಉರಿಯುತ್ತಿದ್ದರೆ ಈ ಪೇಸ್ಟ್ ನ್ನು ಹಚ್ಚಿ
ಬುಧವಾರ, 18 ನವೆಂಬರ್ 2020 (07:29 IST)
ಬೆಂಗಳೂರು : ಮುಖದ ಸ್ಕೀನ್ ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಬಿಸಿಲಿನಲ್ಲಿ ಹೋದಾಗ ಸೂರ್ಯ ಕಿರಣಗಳ ತಾಪ ಮುಖದ ಮೇಲೆ ಬಿದ್ದು ಚರ್ಮ ಉರಿಯಲು ಶುರುವಾಗುತ್ತದೆ. ಇದರಿಂದ ಚರ್ಮ ಕೆಂಪಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿ.
ಮೊಸರು ಚರ್ಮವನ್ನು ಶಮನಗೊಳಿಸುತ್ತದೆ. ಸೌತೆಕಾಯಿ ಕಲೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮಕ್ಕೆ ತಂಪನ್ನು ಒದಗಿಸುತ್ತದೆ. 3 ಚಮಚ ಮೊಸರಿಗೆ ಸೌತೆಕಾಯಿ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 10 ನಿಮಿಷಗಳ ಕಾಲ ಬಿಟ್ಟು ನೀರಿನಲ್ಲಿ ವಾಶ್ ಮಾಡಿ. ಬಿಸಿಲಿಗೆ ಹೋದಾಗಲೆಲ್ಲಾ ಈ ಪೇಸ್ಟ್ ನ್ನು ಅನ್ವಯಿಸಿದರೆ ಮುಖದ ಸ್ಕೀನ್ ಆರೋಗ್ಯವಾಗಿರುತ್ತದೆ.