ಸುಟ್ಟ ಗಾಯಗಳು ಬೇಗ ವಾಸಿಯಾಗಲು ಇದನ್ನು ಹಚ್ಚಿ

ಬುಧವಾರ, 18 ನವೆಂಬರ್ 2020 (07:27 IST)
ಬೆಂಗಳೂರು : ಬೆಂಕಿ ತಾಗಿ ಗಾಯಗಳಾಗುತ್ತವೆ. ಈ ಗಾಯಗಳು ಚಿಕ್ಕದಾಗಿದ್ದರೂ ತುಂಬಾ ನೋವಿನಿಂದ ಕೂಡಿರುತ್ತದೆ. ಈ ಸುಟ್ಟ ಗಾಯಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ.

ಅಲೋವೆರಾ ಜೆಲ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ.  ಇದನ್ನು ಸುಟ್ಟ ಗಾಯಗಳಿಗೆ ಹಚ್ಚಿದರೆ ಆ ಗಾಯದ ಸುತ್ತಲಿನ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ. ಮತ್ತು ಬ್ಯಾಕ್ಟೀರಿಯಾ ಬೆಳವಣೆಗೆಯನ್ನು ತಡೆಯುತ್ತದೆ. ಇದರಿಂದ ಸೋಂಕು ಉಂಟಾಗುವುದಿಲ್ಲ.  

ಜೇನುತುಪ್ಪ ಸುಟ್ಟ ಗಾಯಗಳ ಚಿಕಿತ್ಸೆಗೆ ಬಹಳ ಸಹಕಾರಿ. ಇದು ಕೂಡ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಸುಟ್ಟಗಾಯಗಳಿಗೆ ಜೇನುತುಪ್ಪವನ್ನು ಹಚ್ಚಿದರೆ ಗಾಯ ಬೇಗ ವಾಸಿಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ