ಬೆಂಗಳೂರು: ಬೆಳ್ಳುಳ್ಳಿ ಸೇವನೆಯಿಮದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ದುಷ್ಪರಿಣಾಮಗಳು ಇವೆ ಎಂಬುದು ನಿಮಗೆ ಗೊತ್ತಾ?! ಅವು ಯಾವುವು ನೋಡೋಣ.
ಕೆಟ್ಟ ವಾಸನೆ
ಇದಂತೂ ನಮಗೆಲ್ಲರಿಗೂ ಗೊತ್ತಿರುವಂತದ್ದೇ. ಬೆಳ್ಳುಳ್ಳಿ ಸೇವನೆಯಿಂದ ಬಾಯಿ ವಾಸನೆ ಸಮಸ್ಯೆ ಬರುತ್ತದೆ. ಕೆಲವೊಮ್ಮೆ ಬ್ರಶ್ ಮಾಡಿದರೂ ಇದು ಹೋಗದು.
ತುರಿಕೆ
ಅತಿಯಾಗಿ ಬೆಳ್ಳುಳ್ಳಿ ಸೇವಿಸುವುದರಿಂದ ತುರಿಕೆ, ಚರ್ಮದಲ್ಲಿ ಕೆಂಪಗಾಗುವ ಸಮಸ್ಯೆ ಕಂಡುಬರಬಹುದು.
ತಲೆನೋವು
ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಕೆಲವೊಮ್ಮೆ ತಲೆ ನೋವು ಬರುವ ಸಾಧ್ಯತೆಯಿದೆ. ಇದು ನರಗಳನ್ನು ಉತ್ತೇಜಿಸಿ ತಲೆನೋವಿಗೆ ಕಾರಣವಾಗುತ್ತದೆ ಎನ್ನುವುದು ಕೆಲವು ಅಧ್ಯಯನಗಳಿಂದಲೇ ದೃಢಪಟ್ಟಿದೆ.
ಯೋನಿ ಸೋಂಕಿಗೂ ಕಾರಣವಾಗಬಹುದು!
ಯೋನಿ ಸೋಂಕಿನ ಸಮಸ್ಯೆಯಿದ್ದ ಮಹಿಳೆಯರು ಹಸಿ ಬೆಳ್ಳುಳ್ಳಿ ಸೇವನೆ ಮಾಡದೇ ಇರುವುದೇ ಒಳ್ಳೆಯದು. ಇದು ಮತ್ತಷ್ಟು ತುರಿಕೆಗೆ ಕಾರಣವಾಗಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ