ನಿಮ್ಮ ಬೆಡ್ ರೂಂ ಯಾವ ಬಣ್ಣದಲ್ಲಿದೆ? ಹಾಗಿದ್ದರೆ ನಿಮ್ಮ ಲೈಂಗಿಕ ಜೀವನ ಹೀಗಿರುತ್ತದೆ!

ಮಂಗಳವಾರ, 3 ಜುಲೈ 2018 (09:35 IST)
ಬೆಂಗಳೂರು: ಬೆಡ್ ರೂಂನ ಬಣ್ಣಕ್ಕೂ ನಿಮ್ಮ ಲೈಂಗಿಕ ಜೀವನದ ಸುಖ-ದುಃಖಕ್ಕೂ ಸಂಬಂಧವಿದೆ ಎಂದರೆ ನೀವು ನಂಬಲೇಬೇಕು. ಹೀಗೊಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. ಯಾವ ಬಣ್ಣ ಏನು ಸೂಚಿಸುತ್ತದೆ ನೋಡೋಣ.

ನೀಲಿ
ನೀಲಿ ಬಣ್ಣ ಬೆಡ್ ರೂಂನಲ್ಲಿ ಒಂಥರಾ ಶಾಂತ ವಾತಾವರಣ ಒದಗಿಸುತ್ತದಂತೆ. ಹೀಗಾಗಿ ಈ ಬಣ್ಣದ ಬೆಡ್‍ ರೂಂ ಇದ್ದರೆ ದಂಪತಿಗಳ ಲೈಂಗಿಕ ಜೀವನ ಹದವಾಗಿರುತ್ತದೆ. ಹಾಗೆಯೇ ಇಂತಹ ಬಣ್ಣದ ಬೆಡ್ ರೂಂನಲ್ಲಿ ಸುಖ ನಿದ್ದೆಯೂ ಬರುವುದಂತೆ!

ಹಳದಿ
ಹಳದಿ ಬಣ್ಣ ಹೆಚ್ಚಾಗಿರುವ ಬೆಡ್ ರೂಂನಲ್ಲಿ ಸುಖ ನಿದ್ದೆ ಗ್ಯಾರಂಟಿ. ಇಂತಹ ಬಣ್ಣದ ಬೆಡ್ ರೂಂನಲ್ಲಿ ದಂಪತಿ ರಿಲ್ಯಾಕ್ಸ್ ಆಗುವುದು ಹೆಚ್ಚಂತೆ.

ಸಿಲ್ವರ್
ಬೆಳ್ಳಿ ಪರದೆ, ಬೆಳ್ಳಿ ಬಣ್ಣ ಹುಣ್ಣಮೆಯನ್ನು ನೆನಪಿಸುವುದು. ಇದರಿಂದ ದಂಪತಿ ಬೇರೊಂದು ಮೂಡ್ ಗೆ ಹೋಗುವುದು ಸಹಜವಂತೆ!

ನೇರಳೆ
ನೇರಳೆ ಬಣ್ಣ ದುಬಾರಿ ಜೀವನ ಶೈಲಿ, ಗುಣಮಟ್ಟದ, ಶ್ರೀಮಂತಿಕೆ ಪ್ರತೀಕ. ಇಲ್ಲಿ ದಂಪತಿಯ ಲೈಂಗಿಕ ಕಾಮನೆಗಳು ಅರಳುವುದು ಸಹಜವಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ