ಬೀಟ್ ರೂಟ್ ಜತೆಗೆ ಸೊಪ್ಪು ಇದ್ದರೆ ಬಿಸಾಕಬೇಡಿ!
ಬೀಟ್ ರೂಟ್ ನಲ್ಲಿರುವ ವಿಟಮಿನ್ ಸಿ, ಕಬ್ಬಿಣದಂಶ ರಕ್ತ ತುಂಬಲು ಹಾಗೂ ಹಿಮೋಗ್ಲೋಬಿನ್ ಅಂಶ ಹೆಚ್ಚಲು ಸಹಾಯ ಮಾಡುತ್ತದೆ. ಇದರಿಂದ ಸಹಜವಾಗಿಯೇ ರಕ್ತ ಹೀನತೆ ದೂರವಾಗುತ್ತದೆ.
ಅದರ ಜತೆಗೆ ಇದರ ಸೊಪ್ಪಿನಲ್ಲಿ ಪಿತ್ತಜನಕಾಂಗ ಸಂಬಂಧಿ ಖಾಯಿಲೆಗಳನ್ನು ದೂರ ಮಾಡುವ ಗುಣ ಹೊಂದಿದೆ. ಇದು ವಿಷಕಾರಿ ಅಂಶಗಳನ್ನು ಹೊರತೆಗೆದು ಶರೀರವನ್ನು ಆರೋಗ್ಯಕರವಾಗಿ ಕಾಪಾಡುತ್ತದೆ.