ಪೈನಾಪಲ್ ಬಗ್ಗೆ ಈ ರಹಸ್ಯ ನಿಮಗೆ ತಿಳಿದಿದೆಯೇ?

ಭಾನುವಾರ, 2 ಡಿಸೆಂಬರ್ 2018 (11:46 IST)
ಬೆಂಗಳೂರು: ಪೈನಾಪಲ್ ಹಣ್ಣು ಸೇವನೆ ಯಾರಿಗಿಷ್ಟವಿಲ್ಲ ಹೇಳಿ? ಸ್ವಲ್ಪ ಹುಳಿ, ಸ್ವಲ್ಪ ಸಿಹಿ ಮಿಶ್ರಿತವಾಗಿರುವ ಈ ಹಣ್ಣಿನ ಗುಣ –ಅವಗುಣಗಳ ಬಗ್ಗೆ ನಿಮಗೆ ತಿಳಿದಿದೆಯಾ?


ಲಾಭಗಳು
ಪೈನಾಪಲ್ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ, ಎಲುಬು ಗಟ್ಟಿಯಾಗಲು, ರಕ್ತ ಹೆಪ್ಪುಗಟ್ಟಲು, ಕೀಲು ನೋವು, ಶೀತ, ಕೆಮ್ಮು ಸಮಸ್ಯೆ ನಿವಾರಿಸಲು ಸಹಕರಿಸುತ್ತದೆ. ಅಲ್ಲದೆ, ಇದು ಫಲವಂತಿಕೆ ಹೆಚ್ಚಿಸುವ ಗುಣ ಹೊಂದಿದೆ.

ಅವಗುಣಗಳು
ಪೈನಾಪಲ್ ಸೇವನೆಯ ಅಡ್ಡಪರಿಣಾಮಗಳೇನು ಗೊತ್ತಾ? ಇದನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಅಷ್ಟು ಒಳ್ಳೆಯದಲ್ಲ. ಹಾಗೆಯೇ ಇದನ್ನು ಸೇವಿಸುವುದರಿಂದ ಕೆಲವರಿಗೆ ವಾಂತಿ, ನಾಲಿಗೆ, ಚರ್ಮದಲ್ಲಿ ತುರಿಕೆ, ಬೇಧಿ, ತಲೆನೋವು, ತಲೆ ಸುತ್ತಿದಂತಾಗುವುದು ಇಂತಹ ಸಮಸ್ಯೆಗಳು ಕಂಡುಬರಬಹುದು. ಹಾಗಾಗಿ ಆರೋಗ್ಯದ ಬಗ್ಗೆ ಎಚ್ಚರವಹಿಸಿ ಹಿತ ಮಿತವಾಗಿ ತಿನ್ನಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ