ಕೂದಲು ಉದುರುತ್ತಿದೆಯೇ? ಹಾಗಿದ್ದರೆ ಈ ಆಹಾರವನ್ನು ಚೆನ್ನಾಗಿ ಸೇವಿಸಿ

ಶನಿವಾರ, 1 ಡಿಸೆಂಬರ್ 2018 (09:48 IST)
ಬೆಂಗಳೂರು: ಕೂದಲು ಉದುರುವ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಹಾಗಿದ್ದರೆ ಆಹಾರದಲ್ಲಿ ಇವುಗಳನ್ನು ಹೇರಳವಾಗಿ ಸೇವಿಸಿ.


ಬಸಳೆ/ಪಾಲಕ್ ಸೊಪ್ಪು
ಬಸಳೆ ಮತ್ತು ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ ಮತ್ತು ಸಿ ಹೇರಳವಾಗಿದ್ದು, ಇದು ಕೂದಲುಗಳ ಬೆಳವಣಿಗೆಗೆ ಅನುಕೂಲ. ಹೀಗಾಗಿ ಇವೆರಡನ್ನು ಹೇರಳವಾಗಿ ಸೇವಿಸಿ.

ಮೊಟ್ಟೆ
ಮೊಟ್ಟೆಯ ಎಣ್ಣೆ, ಮೊಟ್ಟೆಯ ಯಾಕ್ ಕೂದಲುಗಳಿಗೆ ಹಚ್ಚಿಕೊಳ್ಳುವಂತೆ ಇದರ ಸೇವನೆಯಿಂದಲೂ ಕೂದಲು ಬೆಳವಣಿಗೆಯಾಗುತ್ತದೆ. ಅದರ ಜತೆಗೆ ಡೈರಿ ಉತ್ಪನ್ನಗಳನ್ನೂ ಸಾಕಷ್ಟು ಸೇವಿಸಿ.

ಸೀಬೆಕಾಯಿ
ಸೀಬೆಕಾಯಿ ಸೇವನೆಯಿಂದ ಕೂದಲು ಸೀಳುವಿಕೆ, ಉದುರುವಿಕೆ ಮುಂತಾದ ಸಮಸ್ಯೆಗಳು ದೂರವಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ಕೂದಲ ಸಮಸ್ಯೆಯನ್ನು ದೂರಮಾಡುತ್ತದೆ.

ಕ್ಯಾರಟ್
ಕ್ಯಾರಟ್, ಪಪ್ಪಾಯಿ ಮುಂತಾದ ತರಕಾರಿಗಳಲ್ಲಿರುವ ಕೆರಟಿನ್, ವಿಟಮಿನ್ ಎ ಅಂಶ ಕಣ್ಣು ಮತ್ತು ಕೂದಲುಗಳ ಬೆಳವಣಿಗೆಗೆ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ