ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರ ಲಾಭಗಳೇನು ಗೊತ್ತಾ?

ಶನಿವಾರ, 24 ನವೆಂಬರ್ 2018 (08:56 IST)
ಬೆಂಗಳೂರು: ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ನೆಲ್ಲಿಕಾಯಿ ಜ್ಯೂಸ್ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ನೆಲ್ಲಿಕಾಯಿ ಜ್ಯೂಸ್ ಸೇವನೆಯ ಲಾಭಗಳೇನು ನೋಡೋಣ.

ಶೀತ, ಕೆಮ್ಮು
ಗಂಟಲು ನೋವು, ಕೆಮ್ಮು ಮುಂತಾದ ಶೀತ ಸಂಬಂಧೀ ಸಮಸ್ಯೆ ಇದ್ದಾಗ ನೆಲ್ಲಿಕಾಯಿ ಜ್ಯೂಸ್ ಸೇವನೆ ಉತ್ತಮ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತೂಕ ಇಳಿಕೆಗೆ
ತೂಕ ಇಳಿಸಿಕೊಳ್ಳಲು ಬಯಸುವವರು ನೆಲ್ಲಿಕಾಯಿ ಜ್ಯೂಸ್ ಸೇವಿಸಬಹುದು. ಇದರಲ್ಲಿ ಬೇಡದ ಕೊಬ್ಬನ್ನು ಹೀರಿಕೊಳ್ಳುವ ಗುಣವಿದೆ.

ಮಧುಮೇಹಿಗಳಿಗೆ
ನೆಲ್ಲಿಕಾಯಿಯಲ್ಲಿರುವ ಕ್ರೋಮಿಯಂ ಎಂಬ ಅಂಶ ರಕ್ತದಲ್ಲಿ ಗ್ಲುಕೋಸ್ ಅಂಶ ಕಡಿಮೆಮಾಡುತ್ತದೆ. ಹೀಗಾಗಿ ಮಧುಮೇಹಿಗಳಿಗೆ ಉತ್ತಮ.

ಜೀರ್ಣಕ್ರಿಯೆಗೆ
ಇದರಲ್ಲಿ ನಾರಿನಂಶ ಹೇರಳವಾಗಿದ್ದು, ಕರುಳಿನಲ್ಲಿ ಅಸಿಡಿಟಿ ಅಂಶ ನಾಶ ಮಾಡುತ್ತದೆ. ಹಾಗೇ ಶರೀರದಿಂದ ವಿಷಕಾರಿ ಅಂಶ ಹೊರಹಾಕುತ್ತದೆ.

ಚರ್ಮಕ್ಕೆ
ಮೊಡವೆ, ಚರ್ಮದಲ್ಲಿ ತುರಿಕೆ ನಾಶ ಮಾಡುವುದಲ್ಲದೆ, ಚರ್ಮ ಹೆಚ್ಚು ಹೊಳಪಾಗಿರುವಂತೆ, ಅವಧಿಗೆ ಮೊದಲು ಚರ್ಮ ಸುಕ್ಕುಗಟ್ಟುವಿಕೆ ತಡೆದು ಆಯಸ್ಸು ವೃದ್ಧಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ