ಏಳು ಗಂಟೆ ಮೊದಲು ರಾತ್ರಿ ಊಟ ಮಾಡಿದರೆ ಆಗುವ ಲಾಭವೇನು ಗೊತ್ತಾ?

ಗುರುವಾರ, 18 ಜನವರಿ 2018 (08:55 IST)
ಬೆಂಗಳೂರು: ರಾತ್ರಿ ಊಟ ಬೇಗ ಮಾಡಬೇಕು ಎಂದು ನಾವು ಹಲವರು ಹೇಳಿದ್ದನ್ನು ಕೇಳಿದ್ದೇವೆ.  ಆದರೆ ರಾತ್ರಿ ಬೇಗ ಊಟ ಮಾಡುವುದರಿಂದ ಆಗುವ ಲಾಭಗಳೇನು ಗೊತ್ತಾ?
 

ತೂಕ ಕಳೆದುಕೊಳ್ಳುತ್ತೀರಾ!
ಸಂಜೆ 6 ರಿಂದ 7 ಗಂಟೆಯ ಒಳಗೆ ಊಟ ಮಾಡುವುದರಿಂದ ನಿಮ್ಮ ಆಹಾರದ ಮೂಲಕ ಸಿಗುವ ಕ್ಯಾಲೊರಿ ಪ್ರಮಾಣ ಸಾಕಷ್ಟು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಬೇಗ ಊಟ ಮಾಡುವುದರಿಂದ ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಜರುಗಲು ಸಾಕಷ್ಟು ಸಮಯ ಸಿಗುತ್ತದೆ. ಇದರಿಂದ ಸಹಜವಾಗಿ ತೂಕ ಕಳೆದುಕೊಳ್ಳಬಹುದು.

ಉತ್ತಮ ನಿದ್ರೆ
ಎದೆಯುರಿ, ಹೊಟ್ಟೆಯುರಿಯಂತಹ ಗ್ಯಾಸ್ಟ್ರಿಕ್ ಸಂಬಂಧಿ ಸಮಸ್ಯೆ ಇರುವವರು ಬೇಗ ಊಟ ಮಾಡುವುದು ಒಳ್ಳೆಯದು. ತಡವಾಗಿ ಊಟ ಮಾಡಿ ತಕ್ಷಣ ಮಲಗುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗಳು ಬಂದು ನಿದ್ರೆಗೆ ಭಂಗವಾಗಬಹುದು. ಬೇಗ ಊಟ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ನಿದ್ರೆಯೂ ಚೆನ್ನಾಗಿ ಆಗುತ್ತದೆ.

ಹೃದಯದ ಆರೋಗ್ಯಕ್ಕೆ
ಸಾಮಾನ್ಯವಾಗಿ ಭಾರತೀಯ ಶೈಲಿಯ ಆಹಾರ ಅಧಿಕ ಸೋಡಿಯಂ ಯುಕ್ತವಾಗಿರುತ್ತದೆ. ಇದನ್ನು ತಡವಾಗಿ ಸೇವಿಸಿ ಮಲಗುವುದರಿಂದ ಇದು ಸರಿಯಾಗಿ ಜೀರ್ಣವಾಗದೇ ರಕ್ತದೊತ್ತಡದಂತಹ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿಯೇ ಹೃದಯ ಖಾಯಿಲೆ, ರಕ್ತದೊತ್ತಡ, ಮಧುಮೇಹಿಗಳು ರಾತ್ರಿ ಹೊಟ್ಟೆ ತುಂಬಾ ಊಟ ಮಾಡಬಾರದೆಂದು ವೈದ್ಯರು ಸಲಹೆ ಮಾಡುತ್ತಾರೆ. ಬೇಗ ಊಟ ಮಾಡುವುದರಿಂದ ಈ ಸಮಸ್ಯೆ ಇರುವುದಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ