ಹೆಸರು ಬೇಳೆ ದೋಸೆ ಮಾಡುವುದು ಹೇಗೆ ಗೊತ್ತಾ?

ಬುಧವಾರ, 17 ಜನವರಿ 2018 (08:24 IST)
ಬೆಂಗಳೂರು: ಪ್ರತಿನಿತ್ಯ ತಿಂಡಿಗೆ ಏನು ಮಾಡೋದು ಎಂಬ ಚಿಂತೆಯೇ? ಹಾಗಿದ್ದರೆ ಹೆಸರು ಬೇಳೆ ದೋಸೆ ಮಾಡಿ. ತಿನ್ನಲು ರುಚಿಕರ ಮಾತ್ರವಲ್ಲ, ಆರೋಗ್ಯಕರ ಕೂಡಾ. ಮಾಡೋದು ಹೇಗೆ ನೋಡಿಕೊಳ್ಳಿ.
 

ಬೇಕಾಗುವ ಸಾಮಗ್ರಿಗಳು
ಹೆಸರು ಬೇಳೆ
ಅಕ್ಕಿ
ಕೊತ್ತಂಬರಿ ಸೊಪ್ಪು
ಕಾಯಿತುರಿ
ಉಪ್ಪು
ಎಣ್ಣೆ

ಮಾಡುವ ವಿಧಾನ
ಮೂರು ಕಪ್ ಅಕ್ಕಿಗೆ ಒಂದು ಕಪ್ ಹೆಸರು ಬೇಳೆಯನ್ನು ಪ್ರತ್ಯೇಕವಾಗಿ ನೆನೆಸಿಡಿ. ಇದು ನೆನೆದ ನಂತರ ಒಂದು ಮಿಕ್ಸಿ ಜಾರ್ ಗೆ ಹೆಸರು ಬೇಳೆ ಹಾಕಿ ರುಬ್ಬಿಕೊಳ್ಳಿ. ನಂತರ ನೆನೆಸಿದ ಅಕ್ಕಿ ಜತೆಗೆ ಕೊತ್ತಂಬರಿ ಸೊಪ್ಪು, ಕಾಯಿತುರಿ ಹಾಗೂ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ನಾಲ್ಕೈದು ಗಂಟೆಗಳ ಕಾಲ ಇಟ್ಟು ನಂತರ ದೋಸೆ ತವಾದ ಮೇಲೆ ಹುಯ್ದುಕೊಳ್ಳಿ. ಕಾಯಿ ಚಟ್ನಿ ಜತೆಗೆ ತಿನ್ನಲು ರುಚಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ