ತ್ರಾಮದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?

ಮಂಗಳವಾರ, 6 ಮಾರ್ಚ್ 2018 (11:11 IST)
ಬೆಂಗಳೂರು: ತಾಮ್ರದ ಪಾತ್ರೆಯಲ್ಲಿನ ನೀರು ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೆಗೆದುಹಾಕುವಲ್ಲಿ ಸಹಾಯಕಾರಿ.  ತಾಮ್ರ, ಸೂಕ್ಷ್ಮಾಣು ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದ್ದು, ಅನೇಕ ರೋಗಗಳ ವಿರುದ್ಧ  ಹೋರಾಡಲು ಸಹಾಯ ಮಾಡುತ್ತದೆ.


1.ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸಲು ನಮ್ಮ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ತಾಮ್ರ ಇರುವುದು ಅಗತ್ಯ. ಥೈರಾಯಿಡ್ ಸಮಸ್ಯೆಗೆ ಹಲವು ಕಾರಣಗಳಿದ್ದರೂ, ತಾಮ್ರದ ಕೊರತೆ ಒಂದು ಪ್ರಮುಖ ಕಾರಣ. ಹೀಗಾಗಿ, ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಲಾಗಿರುವ ನೀರನ್ನು, ಊಟಕ್ಕೆ ಮೊದಲು ಕುಡಿಯುವುದರಿಂದ ಥೈರಾಯಿಡ್ ಸಮಸ್ಯೆ ನಿವಾರಣೆಯಾಗುತ್ತದೆಯಂತೆ.


2.ಸಂಧಿವಾತ ಮತ್ತು ಇತರ ಕೀಲುನೋವುಗಳ ನಿವಾರಣೆಯಲ್ಲಿ ತಾಮ್ರ ಸಹಾಯಮಾಡುತ್ತದೆ.

3. ತಾಮ್ರದ ಕೊರತೆ ರಕ್ತಹೀನತೆಗೆ ಕಾರಣವಾಗಬಹುದು. ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಲಾದ ನೀರನ್ನು ಕುಡಿಯುವುದರಿಂದ ನಿಮ್ಮ ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಬಹುದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ