ಬೆಂಗಳೂರು: ತುಪ್ಪದಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬಿನಾಂಶವಿದೆ ಎಂದು ತುಪ್ಪವನ್ನು ಕೆಲವರು ತಿನ್ನುವುದಿಲ್ಲ. ಆದರೆ ಹಿತಮಿತವಾಗಿ ತುಪ್ಪ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.
ಹಸುವಿನ ತುಪ್ಪ ಹಲವಾರು ಔಷಧೀಯ ಗುಣಗಳ ಆಗರವಾಗಿದೆ. ಇದರ ನಿಯಮಿತ ಸೇವನೆಯಿಂದ ಬುದ್ಧಿ ಚುರುಕಾಗುತ್ತದೆ ಮತ್ತು ಚರ್ಮದ ಕಾಂತಿ ಹೆಚ್ಚುತ್ತದೆ.
ತುಪ್ಪದ ಸೇವನೆಯಿಂದ ಎಲ್ಲಾ ಇಂದ್ರಿಯಗಳು ಚೆನ್ನಾಗಿ ಕೆಲಸ ಮಾಡುತ್ತವೆ, ಜೀರ್ಣ ಶಕ್ತಿ ಹೆಚ್ಚುತ್ತದೆ.
ಅರ್ಧ ಚಮಚ ಮೆಂತ್ಯೆ ಕಾಳನ್ನು ತುಪ್ಪದಲ್ಲಿ ಹುರಿದು ಪುಡಿ ಮಾಡಿ ಮಜ್ಜಿಗೆಗೆ ಹಾಕಿ ಕುಡಿದರೆ ಪಿತ್ತದಿಂದ ಉಂಟಾದ ಹೊಟ್ಟೆ ನೋವು ಕಡಿಮೆಯಾಗುತ್ತದೆ.
ಮಧುಮೇಹ ಮತ್ತು ಹೃದಯದ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಪ್ರೆಗ್ನೆನ್ಸಿ ಸಮಯದಲ್ಲಿ ತುಪ್ಪ ಸೇವನೆ ಮಾಡುವುದರಿಂದ ಮಗು ಆರೋಗ್ಯಕರವಾಗಿ ಹುಟ್ಟುತ್ತದೆ. ಮುಂದೆ ಅವರು ದೊಡ್ಡದಾದಂತೆ ಅವರ ಹಲ್ಲುಗಳು ಸಹ ಸ್ಟ್ರಾಂಗ್ ಆಗುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ