ನಿಮಗೆ ಸಿಹಿ ತಿನ್ನಬೇಕೆಂಬ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ?

ಗುರುವಾರ, 14 ಜೂನ್ 2018 (06:21 IST)
ಬೆಂಗಳೂರು : ಸಿಹಿ ಪದಾರ್ಥಗಳನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದರೂ ಕೂಡ ಕೆಲವರು ಬಾಯಿ ಚಪಲಕ್ಕೆ ತಿಂದು ಬಿಡುತ್ತಾರೆ. ಈ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಯಾಕೆಂದರೆ ಇದು ನಿಮ್ಮ ತಪ್ಪಲ್ಲ, ಇದಕ್ಕೆ ನಿಮ್ಮ ಲಿವರ್ ಉತ್ಪತ್ತಿ ಮಾಡುತ್ತಿರುವ ಹಾರ್ಮೋನ್ ಒಂದು ಕಾರಣ ಎಂಬುದಾಗಿ ಸಂಶೋಧನೆಯೊಂದು ತಿಳಿಸಿದೆ.


ಕೋಪನ್‌ಹೇಗನ್‌ನ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯು FGF21 ಜೀನ್ (ಹಾರ್ಮೋನ್) ಇರುವ ವ್ಯಕ್ತಿಗಳಿಗೆ ಸಿಹಿ ತಿನ್ನುವ ಬಯಕೆಯನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ. ಲಿವರ್‌ ಈ ಹಾರ್ಮೋನ್‌ ಅನ್ನು ಉತ್ಪತ್ತಿ ಮಾಡುತ್ತದೆ. ಈ ಹಾರ್ಮೋನ್‌ ಇರುವವರಿಗೆ ತುಂಬಾ ಸಿಹಿ ಪದಾರ್ಥಗಳನ್ನು ತಿನ್ನಬೇಕೆನಿಸುತ್ತಾ ಇರುತ್ತದೆ. ಈ ಹಾರ್ಮೋನ್‌ ನಮ್ಮ ದೇಹದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಿ ಒಬೆಸಿಟಿ ಅಥವಾ ಟೈಪ್ 2 ಡಯಾಬಿಟಿಸ್‌ ಸಮಸ್ಯೆಗಳನ್ನು ತರಬಹುದೆಂದು ಸಂಶೋಧನೆಯೂ ಹೇಳಿದೆ. ಆದ್ದರಿಂದ ಯಾವಾಗ ಸಿಹಿ ತಿನ್ನುವ ನಮ್ಮ ಬಯಕೆಯನ್ನು ನಮ್ಮಿಂದ ನಿಯಂತ್ರಿಸಲೂ ಸಾಧ್ಯವಾಗುವುದಿಲ್ಲವೋ ಕೂಡಲೇ ವೈದ್ಯರನ್ನು ಕಂಡು ಒಬೆಸಿಟಿ ಹಾಗೂ ಟೈಪ್‌ 2 ಮಧುಮೇಹವನ್ನು ನಿಯಂತ್ರಿಸಲು ಏನು ಮಾಡಬೇಕೆಂದು ಸಲಹೆ ಪಡೆಯುವುದು ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ