ಬೊಕ್ಕ ತಲೆಯ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ!
ಬುಧವಾರ, 13 ಜೂನ್ 2018 (09:22 IST)
ಬೆಂಗಳೂರು: ತಲೆಗೂದಲು ಉದುರುವ ಸಮಸ್ಯೆಯೇ? ಹಾಗಿದ್ದರೆ ಈ ಆಹಾರಗಳನ್ನು ಸೇವಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿ.
ಮೊಟ್ಟೆ ಮತ್ತು ಡೈರಿ ಉತ್ಪನ್ನಗಳು
ವಿಟಮಿನ್ 7 ನಮ್ಮ ಕೂದಲು ಬೆಳೆಯಲು ಸಹಕಾರಿ. ಹಾಗಾಗಿ ಮೊಟ್ಟೆ ಮತ್ತು ಡೈರಿ ಉತ್ಪನ್ನಗಳಲ್ಲಿ ಈ ಅಂಶ ಹೇರಳವಾಗಿದೆ.
ಓಟ್ಸ್
ಒಮೆಗಾ ಫ್ಯಾಟಿ ಆಸಿಡ್, ಜಿಂಕ್, ನಾರಿನಂಶ ಸಾಕಷ್ಟಿರುವ ಓಟ್ಸ್ ಸೇವಿಸುವುದರಿಂದಲೂ ಕೂದಲು ಬೆಳವಣಿಗೆ ಸಾಧ್ಯ.
ಬಾದಾಮಿ
ಬಾದಾಮಿಯಲ್ಲಿರುವ ಬಯೋಟಿನ್ ಮತ್ತು ಮ್ಯಾಗ್ನಿಶಿಯಂ ಅಂಶ ಕೂದಲ ಬೆಳವಣಿಗೆಗೆ ಸಹಕಾರಿ.
ಸ್ಟ್ರಾಬೆರಿ
ಸ್ಟ್ರಾಬೆರಿಯಲ್ಲಿ ಸಾಕಷ್ಟು ಸಿಲಿಕಾ ಮತ್ತು ಖನಿಜಾಂಶವಿದ್ದು ಕೂದಲ ಬೆಳವಣಿಗೆಗೆ ಸಹಕಾರಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.