ಬೆಂಗಳೂರು: ಸಂಭೋಗದ ವೇಳೆ ವೀರ್ಯಾಣು ಹೊರಚೆಲ್ಲುವಾಗ ರಕ್ತದ ಕಲೆ ಕಂಡುಬಂದಿದ್ದರೆ ಅದಕ್ಕೆ ಆತಂಕವಾಗುವುದು ಸಹಜ. ಇದು ಗಂಭೀರ ಖಾಯಿಲೆಯ ಮುನ್ಸೂಚನೆಯೇ ಎಂಬ ಆತಂಕ ಕಾಡುತ್ತದೆ.
ಇದಕ್ಕೆ ಭಯಪಡಬೇಕಿಲ್ಲ. ಹಾಗಂತ ಸುಮ್ಮನೆಯೂ ಕೂರುವಂತಿಲ್ಲ. ಕೆಲವೊಮ್ಮೆ ರಫ್ ಆಗಿ ಮಿಲನ ಕ್ರಿಯೆ ನಡೆಸಿದಾಗ ರಕ್ತ ಬಂದಿರುವ ಸಾಧ್ಯತೆಯಿದೆ. ಅದಲ್ಲದೇ ಹೋದಲ್ಲಿ, ಜನನಾಂಗದ ಸೋಂಕು, ಗಾಯ ಇನ್ನಿತರ ಕಾರಣಕ್ಕೆ ರಕ್ತ ಬರುವ ಸಾಧ್ಯತೆಯಿರುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಅದನ್ನು ಉಪೇಕ್ಷೆ ಮಾಡದೇ ವೈದ್ಯರನ್ನು ಸಂಪರ್ಕಿಸಿದರೆ ಮುಂದೆ ಎದುರಾಗಬಹುದಾದ ಅಪಾಯ ತಪ್ಪಿಸಿಕೊಳ್ಳಬಹುದು.