ಬೆಂಗಳೂರು : ಚಳಿಗಾಲದಲ್ಲಿ ಶುಷ್ಕಗಾಳಿಯಿಂದಾಗಿ ಚರ್ಮವು ಡ್ರೈ ಆಗುತ್ತದೆ. ಅದರಲ್ಲೂ ಒಣ ಚರ್ಮದವರು ಇದರಿಂದ ಹಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಹಾಗಾಗಿ ಒಣ ಚರ್ಮ ಸಮಸ್ಯೆ ಹೋಗಲಾಡಿಸಲು ನುಗ್ಗೆ ಎಣ್ಣೆಯನ್ನು ಬಳಸಬಹುದೇ?
ನುಗ್ಗೆ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳಿವೆ. ಇದು ಚರ್ಮದಲ್ಲಿರುವ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ. ಇದರಲ್ಲಿ ವಿಟಮಿನ್ ಎ, ಇ ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ,. ಇದು ನಿರ್ಜೀವ ಚರ್ಮವನ್ನು ಮೃದುಗೊಳಿಸುತ್ತದೆ. ಇದನ್ನು ನಿಯಮಿತವಾಗಿ ಬಳಸಿದರೆ ತುಂಬಾ ಒಳ್ಳೆಯದು.