ಬೆಂಗಳೂರು : ಕಿತ್ತಳೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಿಂದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಹಾಗೇ ಈ ಕಿತ್ತಳೆ ಹಣ್ಣನಿಂದ ತೂಕವನ್ನು ಇಳಿಸಿಕೊಳ್ಳಬಹುದೇ? ಇದಕ್ಕೆ ಉತ್ತರ ಇಲ್ಲಿದೆ.
ಕಿತ್ತಳೆ ಹಣ್ಣು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ. ಇದು ತೂಕ ನಷ್ಟಕ್ಕೆ ಉತ್ತಮ ಆಯ್ಕೆಯಾಗಿದೆ. ಅಲ್ಲದೇ ಇದು ಹಸಿವನ್ನು ನಿಯಂತ್ರಿಸುವ ಹೆಚ್ಚಿನ ಪ್ರಮಾಣದ ಫೈಬರ್ ನ್ನು ಹೊಂದಿರುತ್ತದೆ. ಇದರಲ್ಲಿರುವ ವಿಟಮಿನ್ ಸಿ ಕೊಬ್ಬನ್ನು ಕರಗಿಸುತ್ತದೆ. ಹಾಗಾಗಿ ಈ ಹಣ್ಣನ್ನು ತೂಕನಷ್ಟಕ್ಕೆ ಬಳಸಬಹುದು ಎಂದು ತಜ್ಞರು ತಿಳಿಸಿದ್ದಾರೆ.