ಕ್ಯಾನ್ಸರ್‌ ಸೂಚಿಸುವ 10 ಮುಖ್ಯ ಲಕ್ಷಣಗಳು

ಗುರುವಾರ, 14 ಮಾರ್ಚ್ 2019 (16:01 IST)
ಕ್ಯಾನ್ಸರ್.. ಲಿಂಗ, ವಯಸ್ಸಿನ ವ್ಯತ್ಯಾಸಗಳಿಲ್ಲದೆ ಪ್ರತಿಯೊಬ್ಬರನ್ನು ಕಾಡುವ ಮಹಾಮಾರಿಯಾಗಿದೆ. ಜೀವಂತವಾಗಿರುವಾಗಲೆ ಜೀವ ತೆಗೆಯುವ ಈ ರೋಗದ ಮುನ್ಸೂಚನೆಯನ್ನು ತಿಳಿದುಕೊಳ್ಳುವುದು ಅತ್ಯಂತ ಮುಖ್ಯ. ಇಲ್ಲವಾದರೆ ಭವಿಷ್ಯದಲ್ಲಿ ನರಕಯಾತನೆಯನ್ನು ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ಮೊದಲೆ ತಿಳಿದುಕೊಂಡು, ವೈದ್ಯರನ್ನು ಸಂಪರ್ಕಿಸಿ.
 
1. ನಿಯಮಿತ ಆಯಾಸ: ಯಾವಾಗಲೂ ಆಯಾಸವಾಗುತ್ತಿದ್ದರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಿ. ಈ ಲಕ್ಷಣಗಳು ಇರುವಂತವರಲ್ಲಿ ಕರುಳಿನ ಕ್ಯಾನ್ಸರ್, ಲುಕೇಮಿಯಾ ಕ್ಯಾನ್ಸರ್ ಬರುವ ಸಾಧ್ಯತೆಗಳಿರುತ್ತವೆ.
 
2. ಇದ್ದಕ್ಕಿದ್ದಂತೆ ತೂಕ ಕಡಿಮೆ: ಕೆಲವು ಕ್ಯಾನ್ಸರ್‌ನಿಂದಾಗಿ ದೇಹದ ತೂಕ ಕ್ರಮೇಣವಾಗಿ ಇಳಿಮುಖವಾಗುತ್ತದೆ. ಇದ್ದಕ್ಕಿದ್ದಂತೆ ಹೆಚ್ಚಿನ ಪ್ರಮಾಣದಲ್ಲಿ ತೂಕದಲ್ಲಿ ಬದಲಾವಣೆಯಾದರೆ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
 
3. ನಿರಂತರ ನೋವು: ಯಾವುದೇ ಕಾರಣವಿಲ್ಲದೆ ಒಂದೇಕಡೆ ನೋವುಂಟಾದರೆ, ಎಷ್ಟೇ ಚಿಕಿತ್ಸೆ ಪಡೆದುಕೊಂಡರೂ ನೋವು ತಗ್ಗದೆ ಇದ್ದರೆ ಕ್ಯಾನ್ಸರ್‌ನ ಸೂಚನೆಯಾಗಿರುವ ಸಾಧ್ಯತೆಗಳಿರುತ್ತವೆ. ಈ ಲಕ್ಷಣಗಳಿರುವರು ಹೆಚ್ಚಾಗಿ ಕರುಳಿನ ಕ್ಯಾನ್ಸರ್, ಬ್ರೇನ್ ಟ್ಯೂಮರ್, ಅಂಡಾಶಯ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳಿವೆ.
 
4. ಪ್ರತಿದಿನ ಜ್ವರ ಬರುತ್ತಿದ್ದರೆ...: ರೋಗ ನಿರೋಧಕಶಕ್ತಿಯ ಮೇಲೆ ಕ್ಯಾನ್ಸರ್ ಪ್ರಭಾವಬೀರುತ್ತದೆ, ಇದರಿಂದ ಪ್ರತಿದಿನ ಜ್ವರ ಬರುತ್ತದೆ. ಲುಕೇಮಿಯಾ ನಂತಹ ರಕ್ತ ಸಂಬಂಧಿತ ಕ್ಯಾನ್ಸರ್‌ಗಳು ಉಂಟಾಗುವ ಸಾಧ್ಯತೆಗಳಿವೆ. 
 
5. ಅಸಹಜ ಊತ: ನಿಮ್ಮ ದೇಹದಲ್ಲಿ ಎಲ್ಲಾದರೂ ಊತ ಕಂಡುಬಂದರೆ ಅನುಮಾನಿಸಬೇಕು. ಮುಖ್ಯವಾಗಿ ದೇಹದಲ್ಲಿ ಎಲ್ಲಾದರೂ ಗಡ್ಡೆಗಳು ಕಂಡುಬಂದರೆ ತಪ್ಪದೇ ಪರೀಕ್ಷಿಸಿಕೊಳ್ಳಬೇಕು. ನಿರ್ಲಕ್ಷ ಮಾಡದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಮಹಿಳೆಯರಲ್ಲಿ ಸ್ತನದ ಮೇಲೆ ಉಂಟಾಗುವ ಗಡ್ಡೆಗಳು ಸ್ತನ ಕ್ಯಾನ್ಸರ್ ಅನ್ನು ಸೂಚಿಸುತ್ತದೆ.
 
6. ಚರ್ಮದಲ್ಲಿ ಬದಲಾವಣೆಗಳು: ಚರ್ಮದ ಮೇಲಾಗುವ ಬದಲಾವಣೆಗಳು ಬಹಳಷ್ಟು ಜನರು ಗುರುತಿಸುವುದಿಲ್ಲ. ಆದರೆ, ಅವು ಚರ್ಮ ಕ್ಯಾನ್ಸರ್ ಆಗಿ ಪರಿವರ್ತಿತವಾಗಬಹುದು. ಚರ್ಮ ಕೆಂಪಗಾದರೆ, ಚಿಕ್ಕ ಚಿಕ್ಕ ಮಚ್ಚೆಗಳು ದೇಹದೆಲ್ಲೆಡೆ ಹೆಚ್ಚಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
 
7. ನಿರಂತರ ಕೆಮ್ಮು: ಸಾಮಾನ್ಯವಾಗಿ ಒಂದು ಬಾರಿ ಕೆಮ್ಮು ಬಂದರೆ ಬೇಗ ಗುಣಮುಖವಾಗುವುದಿಲ್ಲ. ಆದರೆ ಕೆಮ್ಮಿನಿಂದ ನಿಮ್ಮ ಎದೆ, ಭುಜಗಳ ಹತ್ತಿರ ನೋವು ಬರುತ್ತಿದ್ದರೆ ವೈದ್ಯರನ್ನು ಕೂಡಲೇ ಸಂಪರ್ಕಿಸಿ.
 
8. ಮೂತ್ರ ಸಮಸ್ಯೆಗಳು: ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಮೂತ್ರವಿಸರ್ಜನೆ ಆಗುತ್ತಿದ್ದರೆ ತಪ್ಪದೆ ವೈದ್ಯರನ್ನು ಸಂಪರ್ಕಿಸಬೇಕು. ಕರುಳಿನ ಕ್ಯಾನ್ಸರ್ ಬರುವವರಿಗೆ ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೂತ್ರದಲ್ಲಿ ರಕ್ತ ಇಲ್ಲವೆ ನೋವು ಇದ್ದರೆ ಪ್ರೊಸ್ಟೇಟ್ ಕ್ಯಾನ್ಸರ್‌ನ ಲಕ್ಷಣಗಳಾಗಿರುತ್ತವೆ.
 
9. ರಕ್ತಸ್ರಾವ: ಕೆಮ್ಮುವಾಗ ಬಾಯಿಂದ ರಕ್ತ ಬಂದರೆ ಅದು ಕ್ಯಾನ್ಸರ್ ಲಕ್ಷಣಗಳಾಗಿರಬಹುದು. ಇದನ್ನು ನಿರ್ಲಕ್ಷ ಮಾಡದೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
 
10. ಆಹಾರ ನುಂಗುವಲ್ಲಿ ಸಮಸ್ಯೆ: ಆಹಾರವನ್ನು ನುಂಗುವಾಗ ಅಥವಾ ಅಜೀರ್ಣ ಸಮಸ್ಯೆ ಆಗಾಗ್ಗೆ ಸಂಭವಿಸುತ್ತಿದ್ದರೆ ತಪ್ಪದೇ ವೈದ್ಯರನ್ನು ಸಂಪರ್ಕಿಸಬೇಕು. ಈ ಲಕ್ಷಣಗಳು ಹೊಟ್ಟೆಯಲ್ಲಿ ಅಥವಾ ಅನ್ನನಾಳದ ಕ್ಯಾನ್ಸರ್ ಉಂಟಾಗುವ ಅವಕಾಶಗಳಿರಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ