ನರಹುಲಿ (Warts) ಹೇಗೆ ಉಂಟಾಗುತ್ತದೆ? ನಿವಾರಣೆ ಹೇಗೆ?

ಗುರುವಾರ, 14 ಮಾರ್ಚ್ 2019 (15:27 IST)
ಚರ್ಮದ ಮೇಲೆ ನರಹುಲಿ ಅಥವಾ ಸಣ್ಣಗಂತಿಗಳು ಪ್ರತಿಯೊಬ್ಬರಲ್ಲೂ ಕಾಣಿಸಿಕೊಳ್ಳುತ್ತದೆ. ಇಂಗ್ಲೀಷ್‌ನಲ್ಲಿ ವಾರ್ಟ್ಸ್ (Warts) ಎನ್ನುತ್ತಾರೆ. ಹ್ಯೂಮನ್ ಪಾಪಿಲೋಮ ಎನ್ನುವ ವೈರಸ್‌ನಿಂದ ಈ ಸಣ್ಣಗಂತಿಗಳು ಉಂಟಾಗುತ್ತವೆ. ಇವುಗಳು ಹೆಚ್ಚಾಗಿ ಮುಖ, ಕುತ್ತಿಗೆಯ ಭಾಗ, ಕೈಗಳು, ಪಾದಗಳ ಮೇಲೆ ಕಾಣಿಸಿಕೊಳ್ಳುತ್ತವೆ. ಚರ್ಮಕ್ಕೆ ಅಂಟಿಕೊಂಡಿರುವ ಕೆಲವು ಸಣ್ಣಗಂತಿಗಳು ಅಷ್ಟಾಗಿ ನೋವಾಗುವುದಿಲ್ಲ. ಆದರೆ, ಕೆಲವು ತುರಿಕೆ ಉಂಟುಮಾಡುತ್ತದೆ.
ನರಹುಲಿ ಅಥವಾ ಸಣ್ಣಗಂತಿಗಳ ವಿಧಗಳು: ಕೈಗಳ ಮೇಲೆ ಬರುವ ಗಂತಿಗಳನ್ನು ಕಾಮನ್ ವಾರ್ಟ್ಸ್ ಎನ್ನುತ್ತಾರೆ. ಪಾದಗಳ ಮೇಲೆ ಬರುವ ಗಂತಿಗಳನ್ನು ಪ್ಲಾಂಟಾರ್ ವಾರ್ಟ್ಸ್, ಮುಖ, ಕುತ್ತಿಗೆ ಮೇಲೆ ಕಾಣಿಸಿಕೊಳ್ಳುವ ಗಂತಿಗಳನ್ನು ಪ್ಲಾಟ್ ವಾರ್ಟ್ಸ್ ಎನ್ನುತ್ತಾರೆ. ಕೆಲವರಿಗೆ ಜನನಾಂಗದ ಮೇಲೂ ಇವು ಕಾಣಿಸಿಕೊಳ್ಳುತ್ತದೆ. ಅಂತಹವುಗಳನ್ನು ಜನೈಟರ್ ವಾರ್ಟ್ಸ್ ಎಂದು ಕರೆಯುತ್ತಾರೆ.
 
ವೈರಲ್ ಸೋಂಕಿನಿಂದ... ರೋಗನಿರೋಧಕ ಶಕ್ತಿ ಕಡಿಮೆಯಾದಾಗ, ಹಾರ್ಮೋನು ಅಸಮತೋಲನವಾದಾಗ ಕೆಲವು ವೈರಸ್‌ಗಳು ದೇಹವನ್ನು ಹೊಕ್ಕಿ ಇಂತಹ ಗಂತಿಗಳನ್ನು ಸೃಷ್ಟಿ ಮಾಡುತ್ತದೆ. ಇಂತಹ ಸಣ್ಣ ಗಂತಿಗಳನ್ನು ಕತ್ತರಿಸುವುದು, ಸುಡುವ ಕೆಲಸವನ್ನು ಮಾಡಬಾರದು. ಮನೆ ಮದ್ದು ಅಥವಾ ವೈದ್ಯರನ್ನು ಸಂಪರ್ಕಿಸಿ ಇವುಗಳನ್ನು ಹೋಗಲಾಡಿಸಬೇಕು. ಇವುಗಳನ್ನು ಹೋಗಲಾಡಿಸಲು ಮುಖ್ಯವಾಗಿ 5 ಮನೆಮದ್ದುಗಳನ್ನು ತಿಳಿಸಲಾಗಿದೆ.
 
1. ಆಪಲ್ ಸೈಡರ್ ವಿನಿಗರ್: ಇದರಲ್ಲಿ ಅಧಿಕ ಆಸಿಡ್ ಕಂಟೆಂಟ್ ಇರುತ್ತದೆ. ಇದರಿಂದಾಗಿ ಗಂತಿಗಳು ದೊಡ್ಡದಾಗಿ ಬೆಳೆಯದೆ ಕ್ರಮೇಣ ಕಡಿಮೆಯಾಗುತ್ತದೆ. ಹತ್ತಿಯನ್ನು ಆಪಲ್ ಸೈಡರ್ ವಿನಿಗರ್‌ನಲ್ಲಿ ಅದ್ದಿ ಗಂತಿಗಳು ಇರುವ ಕಡೆ ಹಚ್ಚಬೇಕು. ಹೀಗೆ ವಾರದಲ್ಲಿ 5 ದಿನ ಮಾಡಿದರೆ ಸಂಪೂರ್ಣವಾಗಿ ಮಾಯವಾಗುತ್ತದೆ.
 
2. ಕತ್ತಾಳೆ: ಇದರಲ್ಲಿರುವ ಮೆಲಿಕ್ ಆಸಿಡ್ ಸಣ್ಣಗಂತಿಗಳಲ್ಲಿರುವ ಸೋಂಕನ್ನು ನಿವಾರಿಸುತ್ತದೆ. ಇದಕ್ಕೆ ನೀವು ಕತ್ತಾಳೆ ಎಲೆಯ ಮಧ್ಯದಲ್ಲಿರುವ ಚಿಗುರನ್ನು ತೆಗೆದುಕೊಂಡು ಅದರ ರಸವನ್ನು ಗಂತಿಗಳ ಮೇಲೆ ಹಚ್ಚಿರಿ.
 
3. ಬೇಕಿಂಗ್ ಪೌಡರ್: ಹರಳೆಣ್ಣೆಯಲ್ಲಿ ಸ್ವಲ್ಪ ಬೇಕಿಂಗ್ ಪೌಡರ್ ಹಾಕಿ ಚೆನ್ನಾಗಿ ಮಿಶ್ರಣಮಾಡಿ. ಅದನ್ನು ಗಂತಿಗಳ ಮೇಲೆ ಹಚ್ಚಿ ಇಡೀ ರಾತ್ರಿ ಹಾಗೆ ಉಳಿಸಿಕೊಳ್ಳಿ. ಹೀಗೆ ಎರಡು ಅಥವಾ ಮೂರು ದಿನಗಳು ಮಾಡುತ್ತಾ ಬಂದರೆ ಸಣ್ಣಗಂತಿಗಳು ಸಂಪೂರ್ಣವಾಗಿ ಮಾಯವಾಗುತ್ತದೆ.
 
4. ಬಾಳೆಹಣ್ಣಿನ ಸಿಪ್ಪೆ: ಬಾಳೆಹಣ್ಣಿನ ಸಿಪ್ಪೆಯಲ್ಲಿರುವ ಎಂಜೈಮಿನ್‌ಗಳು ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದೆ. ಬಾಳೆಹಣ್ಣಿನ ಸಿಪ್ಪೆಯಿಂದ ಸಣ್ಣಗಂತಿಗಳ ಮೇಲೆ ಪ್ರತಿದಿನ ಉಜ್ಜುತ್ತಾ ಬಂದರೆ ಕ್ರಮೇಣ ಕಡಿಮೆಯಾಗುತ್ತಾರ ಬರುತ್ತದೆ.  
 
5. ಬೆಳ್ಳುಳ್ಳಿ: ಚರ್ಮ ರೋಗದ ನಿವಾರಣೆಗೆ ಬೆಳ್ಳುಳ್ಳಿ ರಾಮಬಾಣ. ಇದರಲ್ಲಿರುವ ಎಲಿಸಿನ್.. ಫಂಗಸ್, ವೈರಸ್ ನಂತಹ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡುತ್ತದೆ. ಹಾಗೆಯೇ ಸಣ್ಣಗಂತಿಗಳನ್ನು ಹೋಗಲಾಡಿಸಲು ಇದು ಉತ್ತಮವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಬೆಳ್ಳುಳ್ಳಿ ಪೇಸ್ಟ್ ಅನ್ನು ಗಂತಿಗಳ ಮೇಲೆ ಹಚ್ಚಿದರೆ ಸಾಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ