ಸಿಸೇರಿಯನ್ ಆದವರು ಅಪ್ಪಿತಪ್ಪಿಯೂ ಇವುಗಳನ್ನು ಮಾಡಬೇಡಿ

ಸೋಮವಾರ, 4 ನವೆಂಬರ್ 2019 (07:37 IST)
ಬೆಂಗಳೂರು :ಇತ್ತೀಚೆಗೆ ಸಿಸೇರಿಯನ್ ಆಗುವುದು ಸಾಮಾನ್ಯವಾಗಿದೆ. ಆದರೆ ಸೀಸೇರಿಯನ್ ಮಾಡಿಕೊಂಡವರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸಬೇಕಾಗುತ್ತದೆ. ನಿರ್ಲಕ್ಷಿಸಿದರೆ ಜೀವಕ್ಕೆ ಆಪತ್ತು ಬರುವ ಸಂಭವವಿರುತ್ತದೆ. ಆದ್ದರಿಂದ ಸಿಸೇರಿಯನ್ ಆದ ಬಳಿಕ ಕೆಲವು ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.




*ಸಿಸೇರಿಯನ್ ನಂತರ ಗ್ಯಾಸ್ ಉತ್ಪತ್ತಿ ಮಾಡುವ, ಅಲರ್ಜಿ ಹಾಗೂ ಮಲಬದ್ಧತೆ ಉಂಟುಮಾಡುವ ಆಹಾರವನ್ನು ಸೇವಿಸಬೇಡಿ.
*ಯಾವುದೇ ಕಾರಣಕ್ಕೂ ಜೋರಾಗಿ ನಗಬೇಡಿ.

*ಜೋರಾಗಿ ಕೆಮ್ಮಬೇಡಿ ಹಾಗೂ ಶೀತ , ನೆಗಡಿ ಸಮಸ್ಯೆಗೆ ಒಳಗಾಗಬೇಡಿ.

*ಪದೇ ಪದೇ ಸಿಸೇರಿಯನ್ ಮಾಡಿರುವ ಜಾಗವನ್ನು ಮುಟ್ಟಬೇಡಿ. ಇದರಿಂದ ಇನ್ ಫೆಕ್ಷನ್ ಆಗುವ ಸಂಭವವಿರುತ್ತದೆ.

* ಹೆಚ್ಚು ಮೆಟ್ಟಿಲುಗಳನ್ನು ಹತ್ತಬಾರದು.

*ತುಂಬಾ ಭಾರವಾದ ವಸ್ತುಗಳನ್ನು ಎತ್ತುವಂತಹ ಹಾಗೂ ಆಯಾಸವಾಗುವಂತಹ ಮನೆಗೆಲಸ ಮಾಡಬೇಡಿ.

* 10ವಾರಗಳ ವರೆಗೆ ಲೈಂಗಿಕತೆಯಿಂದ ದೂರವಿರಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ