ಗರ್ಭಾವಸ್ಥೆಯಲ್ಲಿ ಮೂಡುವ ಮೊಡವೆಗಳ ಸಮಸ್ಯೆಗೆ ಇಲ್ಲಿದೆ ಮನೆಮದ್ದು
ಸೋಮವಾರ, 4 ನವೆಂಬರ್ 2019 (07:35 IST)
ಬೆಂಗಳೂರು : ಮಹಿಳೆಯರು ಗರ್ಭಾವಸ್ಥೆಯಲ್ಲಿ ಹಾರ್ಮೋನ್ ನಿಂದ ಮೊಡವೆಗಳ ಸಮಸ್ಯೆಯಿಂದ ಬಳಲುತ್ತಾರೆ. ಆದರೆ ಈ ವೇಳೆ ಅವರ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಇದಕ್ಕೆ ಕೆಮಿಕಲ್ ಯುಕ್ತ ಕ್ರೀಂಗಳನ್ನು ಬಳಸಿದರೆ ಹಾನಿಯುಂಟಾಗುವ ಸಂಭವವಿರುತ್ತದೆ. ಆದ್ದರಿಂದ ಈ ಮೊಡವೆ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.
*ನಿಂಬೆ ಹಣ್ಣು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದರಿಂದ ಇದನ್ನು ಮೊಡವೆ ಮೇಲೆ ಹಚ್ಚುವುದರಿಂದ ಮೊಡವೆ ಬೇಗನೆ ವಾಸಿಯಾಗುತ್ತದೆ.
*ತೆಂಗಿನೆಣ್ಣೆಯಲ್ಲಿ ನೈಸರ್ಗಿಕವಾದ ರೋಗ ನಿರೋಧಕ ಶಕ್ತಿ ಹಾಗೂ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣವಿರುವುದರಿಂದ ಇದನ್ನು ಮೊಡವೆ ಮೇಲೆ ಹಚ್ಚಿದರೆ ಅದು ಬೇಗ ನಿವಾರಣೆಯಾಗುತ್ತದೆ.
*ಜೇನುತುಪ್ಪ ನಂಜಿನ ಅಂಶವನ್ನು ತೆಗೆದುಹಾಕುವುದರಿಂದ ಮೊಡವೆಗಳಿಗೆ ಇದನ್ನು ಹಚ್ಚಿದರೆ ಅದು ಬೇಗ ಕಡಿಮೆಯಾಗುತ್ತದೆ.