ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಗೆ ಅವುಗಳ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಕೆಲವು ಪ್ರಾಣಿಗಳು ಸತ್ತವು. ಸಿಗರೇಟ್‌ಗೆ ಬದಲಿಯಾಗಿ ಸೇದುವ ಇ-ಸಿಗರೇಟ್ ಆವಿಯಲ್ಲಿ ಫ್ರೀ ರ‌್ಯಾಡಿಕಲ್ ವಿಷಪದಾರ್ಥವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಸಿಗರೇಟ್ ಹೊಗೆ ಮತ್ತು ವಾಯು ಮಾಲಿನ್ಯದಲ್ಲಿ ಕಂಡುಬರುವ ವಿಷಕಾರಿ ವಸ್ತುವಿಗೆ ಹೋಲಿಕೆಯಾಗುತ್ತದೆ ಎಂದಿದ್ದಾರೆ.
ಫ್ರೀ ರಾಡಿಕಲ್ಸ್ ಅತ್ಯಧಿಕ ಪ್ರತಿಕ್ರಿಯಾ ಅಣುವಾಗಿದ್ದು, ಡಿಎನ್‌ಎ ಮತ್ತು ಜೀವಕೋಶ ಪೊರೆಗಳಿಗೆ ಹಾನಿವುಂಟುಮಾಡುತ್ತದೆ. ನಮ್ಮ ಶೋಧನೆಯಲ್ಲಿ ಶ್ವಾಸಕೋಶಗಳಿಗೆ ಹಾನಿ ಸಂಬಂಧಿಸಿದಂತೆ ಇ-ಸಿಗರೇಟ್ ತಟಸ್ಥವಲ್ಲ. ಇಲಿಯ ಮೇಲಿನ ಪ್ರಯೋಗದಲ್ಲಿ ಉಸಿರಾಟದ ಸೋಂಕು ಸಾಧ್ಯತೆ ಹೆಚ್ಚಿದ್ದು ಕಂಡುಬಂದಿದೆ.