ಬಾಯಿ ವಾಸನೆ ಬರುತ್ತಿದೆಯೇ? ಹಾಗಿದ್ದರೆ ಈ ಸಿಂಪಲ್ ಟ್ರಿಕ್ ಮಾಡಿ ನೋಡಿ!

ಶುಕ್ರವಾರ, 28 ಸೆಪ್ಟಂಬರ್ 2018 (09:15 IST)
ಬೆಂಗಳೂರು: ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಯಾರ ಎದುರೂ ಬಾಯ್ಬಿಡುವ ಹಾಗಾಗಿದೆಯೇ? ಹಾಗಿದ್ದರೆ ಈ ಸಿಂಪಲ್ ಉಪಾಯ ಮಾಡಿ ನೋಡಿ.

ನೀರು ಸೇವನೆ
ಪ್ರತಿ ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ಉಗುರು ಬೆಚ್ಚಗಿನ ನೀರು ಸೇವಿಸಿ. ಇದರಿಂದ ಬಾಯಿಯಲ್ಲಿರುವ ಕ್ರಿಮಿಗಳು ನಾಶವಾಗಬಹುದು. ಹಾಗೆಯೇ ಜೀರ್ಣಕ್ರಿಯೆಯೂ ಸುಗಮವಾಗುವುದು.

ಲವಂಗ, ಏಲಕ್ಕಿ
ಆಹಾರದಲ್ಲಿ ಆದಷ್ಟು ಸುಗಂಧ ದ್ರವ್ಯಗಳಾದ ಲವಂಗ, ಏಲಕ್ಕಿ ಬಳಸಿ. ಇದು ಬಾಯಿಗೆ ಘಮ ಕೊಡುತ್ತದೆ.

ಬಾಯಿ ಮುಕ್ಕಳಿಸುವುದು
ಪ್ರತೀ ಬಾರಿ ಆಹಾರ ಸೇವಿಸಿದ ಮೇಲೆ ಶುದ್ಧ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಗಂಟೆಗೊಮ್ಮೆ ಉಗುರು ಬೆಚ್ಚಗಿನ ನೀರಲ್ಲಿ ಬಾಯಿ ಮುಕ್ಕಳಿಸಿಕೊಂಡು ಕುಡಿಯಿರಿ.

ಬ್ರಷ್ ಮಾಡಿ
ಎಲ್ಲಕ್ಕಿಂತ ಮುಖ್ಯವಾಗಿ ಚೆನ್ನಾಗಿ ಬ್ರಷ್ ಮಾಡಿ. ಪ್ರತೀ ಬಾರಿ ಆಹಾರ ಸೇವನೆ ಮಾಡಿದ ಮೇಲೂ ಚೆನ್ನಾಗಿ ಬ್ರಷ್ ಮಾಡುವುದನ್ನು ಮರೆಯಬೇಡಿ. ಬಾಯಿಯಲ್ಲಿ ನಾವು ಸೇವಿಸಿದ ಆಹಾರ ಕಣಗಳು ಹಾಗೇ ಉಳಿದುಕೊಳ್ಳುವುದರಿಂದ ಬಾಯಿ ವಾಸನೆ ಬರುತ್ತದೆ ಎನ್ನುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ