ಕನ್ಯೆ ಎಂದು ನಂಬಿಸಿ ಗರ್ಭಿಣಿಯಾದ ಮೇಲೆ ಮದುವೆ, ಮಗುವಿನ ವಿಷಯ ಹೊರಹಾಕಿದ ಯುವತಿ
ಬುಧವಾರ, 18 ಮಾರ್ಚ್ 2020 (18:12 IST)
ಪ್ರಶ್ನೆ: ಸರ್, ನಾನು ಒಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ನಮ್ಮಿಬ್ಬರದೂ ಆರು ತಿಂಗಳ ಪ್ರೇಮ. ಜಾತಿ ಬೇರೆಯಾಗಿದ್ದರೂ ಮದುವೆಯಾಗೋಕೆ ನಿರ್ಧಾರ ಮಾಡಿದ್ದೇವೆ. ನನ್ನ ಸಮಸ್ಯೆ ಏನೆಂದರೆ, ನಾನು ಅವಳು ಸೇರಿ ಹಲವು ಬಾರಿ ಸಂಭೋಗ ನಡೆಸಿದ್ದೇವೆ.
ಇದೀಗ ಅವಳು ಗರ್ಭಿಣಿಯಾಗಿದ್ದಾಳೆ. ಅವಳು ಗರ್ಭಿಣಿಯಾದ ಬಳಿಕವಷ್ಟೇ ಅವಳಿಗೆ ಈಗಾಗಲೇ ಮದುವೆಯಾಗಿದೆ. ಮಗು ಇದೆ ಅನ್ನೋ ವಿಷಯ ಗೊತ್ತಾಗಿದೆ. ಆದರೆ ಈಗ ಹೊಟ್ಟೆಯಲ್ಲಿ ಹುಟ್ಟುತ್ತಿರುವ ಮಗು ನನ್ನದೇ ಅಂತ ಹೇಳ್ತಿದ್ದಾಳೆ. ಮುಂದೇನು ಮಾಡೋದು ಅನ್ನೋದೇ ಚಿಂತೆಯಾಗಿದೆ.
ಉತ್ತರ: ಅಸಲಿಗೆ ನಿಮ್ಮದು ದೊಡ್ಡ ಸಮಸ್ಯೆಯೇ ಅಲ್ಲ. ನೀವು ನಿಮ್ಮ ಪ್ರೇಯಸಿ ಜತೆ ಲೈಂಗಿಕ ಸುಖ ಅನುಭವಿಸಿದ್ದೀರಿ. ಪ್ರೀತಿ ಮಾಡೋದಕ್ಕೆ ಮೊದಲು ಅವಳ ಬಗ್ಗೆ ಯೋಚನೆ ಮಾಡಬೇಕಿತ್ತು. ಅವಳೂ ಸಹ ತನ್ನ ಮದುವೆ, ಮಗುವಿನ ಬಗ್ಗೆ ನಿಮ್ಮೆದರು ವಿಷಯ ಬಿಚ್ಚಿಡಬೇಕಿತ್ತು.
ಅವಳು ನಿಮಗೆ ಇಷ್ಟ ಆಗಿದ್ದರೆ ಡಿವೋರ್ಸ್ ಕೊಡಿಸಿ ಮದುವೆಯಾಗಿ. ಅವಳು ಗರ್ಭಿಣಿಯಾಗಲು ನೀವು ಕಾರಣ ಅಲ್ಲ ಅನ್ನೋದಾದ್ರೆ ವೈದ್ಯಕೀಯ ಪರೀಕ್ಷೆ ನಡೆಸಿಕೊಳ್ಳಿ. ಅವಳ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ.