ಗಂಡು-ಹೆಣ್ಣಿನ ದೇಹಗಳು ಒಂದಾದಲ್ಲಿ ಭಾವನಾತ್ಮಕ ಬೆಸುಗೆ

ಭಾನುವಾರ, 22 ಮಾರ್ಚ್ 2020 (18:15 IST)
ಸರಸ ಆಡುವುದಕ್ಕೂ ಟೈಮ್ ಇಲ್ಲ. ಟೈಮ್ ಇದ್ದರೆ ಕೈಯಲ್ಲಿ ಅದು ಬಿಡೋದಿಲ್ಲ ಅನ್ನೋ ಜನರೇ ಜಾಸ್ತಿಯಾಗ್ತಿದ್ದಾರೆ.

ಇಂದಿನ ನಮ್ಮ ಆಧುನಿಕ ಜೀವನದಲ್ಲಿ ಯುವಕ-ಯುವತಿಯರು ನಿತ್ಯವೂ ತುಂಬಾನೇ ಬ್ಯುಸಿಯಾಗಿದ್ದಾರೆ. ಬ್ಯುಸಿ ಲೈಫ್ ನಿಂದಾಗಿ ಜೀವನ ಯಂತ್ರದ ಚಕ್ರದ ತರಹ ತಿರುತ್ತಿದೆ. ಈ ನಡುವೆ ಕೆಲವರಿಗೆ ಲೈಂಗಿಕ ಕ್ರಿಯೆ ನಡೆಸೋದಕ್ಕೂ ಟೈಮ್ ಸಿಕ್ತಿಲ್ಲ. 

ನಮ್ಮ ಸಮಾಜದಲ್ಲಿ ಅದರಲ್ಲೂ ಸಿಟಿಗಳಲ್ಲಿನ ಹೆಚ್ಚಿನ ಯುವಜನರ ಕಂಪ್ಲೇಂಟ್ ಇದೇ ಆಗಿದೆ. ಗೆಳತಿ, ಸಂಗಾತಿ ಜತೆಗೆ ರೋಮ್ಯಾನ್ಸ್ ಮಾಡಲು ಸಮಯವಿಲ್ಲ ಅನ್ನೋದು ಅಷ್ಟೇ ಸತ್ಯ.

ಇನ್ನು, ಈ ಸಮಸ್ಯೆ ಹೋಗಲಾಡಿಸೋಕೆ ಮೊದಲನೆಯದಾಗಿ ಲೈಂಗಿಕ ಕ್ರಿಯೆಯೂ ಒಂದು ಅನಿವಾರ್ಯ ಎನ್ನುವುದನ್ನು ಮನಗಾಣಬೇಕು.  ಮನೆಗೆ ಬಂದರೆ ಮೊಬೈಲ್, ಲ್ಯಾಪಟಾಪ್ ಬಳಕೆಗೆ ಗುಡ್ ಬೈ ಹೇಳಿ. ಇದರಿಂದ ನಿಮ್ಮಾಕೆಗೆ ಹೆಚ್ಚು ಸಮಯ ಕೊಡಲು ಸಹಾಯಕವಾಗುತ್ತದೆ.  

ವಾರವಿಡೀ ದುಡಿದು ವಾರಂತ್ಯದಲ್ಲಿ ಒಂದು ದಿನ ರಜಾ ಸಿಗುವಾಗಲೂ ಕೇವಲ ಮನೆಗೆಲಸದಲ್ಲೇ ಮುಳುಗಿ ಹೋಗಬೇಡಿ. ಆಗ ನಿಮ್ಮ ಖಾಸಗಿ ಸಮಯಕ್ಕಾಗಿ ಮೀಸಲಿಡಿ.

ಹೊರಗಡೆ ಸುತ್ತಾಡಿ, ನಿಮ್ಮದೇ ಟೈಮ್ ಎಂಜಾಯ್ ಮಾಡಿ. ಯಾಕೆಂದರೆ ದಂಪತಿ ಭಾವನಾತ್ಮಕವಾಗಿ ಹತ್ತಿರವಾಗಬೇಕಾದರೆ ದೈಹಿಕವಾಗಿ ಒಂದಾಗುವುದೂ ಮುಖ್ಯ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ