ಪ್ರೆಶರ್ ಕುಕ್ಕರ್ನಲ್ಲಿ ಈ ಆಹಾರ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಬೇಯಿಸಬೇಡಿ

ಶುಕ್ರವಾರ, 28 ಜುಲೈ 2023 (08:07 IST)
ಅಡುಗೆ ಮನೆಯಲ್ಲಿ ಪ್ರೆಶರ್ ಕುಕ್ಕರ್ ಇದ್ದರೆ ಅರ್ಧ ಅಡುಗೆಯೇ ಮುಗಿದಷ್ಟು ತೃಪ್ತಿ ದೊರೆಯುವುದಂತೂ ಸತ್ಯ. ಮೊದಲು ಸಾಂಬಾರು ಮಾಡಬೇಕೆಂದರೆ ಬೇಳೆ, ತರಕಾರಿ ಎಲ್ಲವನ್ನೂ ಬೇರೆ ಬೇರೆ ಬೇಯಿಸಿಕೊಳ್ಳಬೇಕಿತ್ತು,

ಅನ್ನ ಮಾಡಬೇಕೆಂದರೂ ಒಂದು ಪಾತ್ರೆಯಲ್ಲಿ ನೀರು ಕುದಿಯಲು ಇಟ್ಟು ನೀರು ಬಿಸಿಯಾದ ಮೇಲೆ ಅದಕ್ಕೆ ಅದಕ್ಕೆ ಅಕ್ಕಿ ಹಾಕಿ ಹೋಗುವಾಗ ಬರುವಾಗ ನೋಡುತ್ತಲೇ ಇರಬೇಕಿತ್ತು. ಆದರೆ ಈಗ ಹಾಗಿಲ್ಲ ಕುಕ್ಕರ್ನಿಂದ ಎಲ್ಲವೂ ಸುಲಭವಾಗಿದೆ. ಆದರೆ ಎಲ್ಲವನ್ನು ತಯಾರಿಸಲು ಪ್ರೆಶರ್ ಕುಕ್ಕರ್ ಅನ್ನು ಬಳಸಬೇಕಾದ ಅಗತ್ಯವಿಲ್ಲ.

ಕೆಲವು ಆಹಾರ ಪದಾರ್ಥಗಳನ್ನು ಕುಕ್ಕರ್ನಲ್ಲಿ ಬೇಯಿಸಬಾರದು ಅವುಗಳ ಬಗ್ಗೆ ತಿಳಿಯಿರಿ ಹಾಲಿನ ಉತ್ಪನ್ನಗಳು ಹಾಲು, ಮೊಸರು ಅಥವಾ ಕೆನೆ ಮುಂತಾದ ಡೈರಿ ಉತ್ಪನ್ನಗಳಿಗೆ ಸಂಬಂಧಿಸಿದ ಭಕ್ಷ್ಯಗಳನ್ನು ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಬಾರದು. ಏಕೆಂದರೆ ಕುಕ್ಕರ್ನಲ್ಲಿ ಅತಿಯಾದ ಶಾಖದಿಂದಾಗಿ, ಡೈರಿ ಉತ್ಪನ್ನವು ಸ್ಫೋಟಗೊಂಡು ಹಾಳಾಗಬಹುದು.

ಕರಿದ ಪದಾರ್ಥಗಳು ಕರಿದ ಪದಾರ್ಥಗಳನ್ನು ಕೂಡ ಪ್ರೆಶರ್ ಕುಕ್ಕರ್ನಲ್ಲಿ ಬೇಯಿಸಬಾರದು. ಏಕೆಂದರೆ ಅತಿಯಾದ ಶಾಖ ಮತ್ತು ಬಿಸಿ ಎಣ್ಣೆಯಿಂದಾಗಿ, ಆಹಾರವು ಚೆಲ್ಲಬಹುದು ಮತ್ತು ಸುಡುವಿಕೆಗೆ ಸಂಬಂಧಿಸಿದ ಘಟನೆಗಳು ಸಂಭವಿಸಬಹುದು.

ಪಾಸ್ತಾ ಮತ್ತು ನೂಡಲ್ಸ್ ಪಾಸ್ಟಾ ಮತ್ತು ನೂಡಲ್ಸ್ನಂತಹ ಆಹಾರ ಪದಾರ್ಥಗಳನ್ನು ಅಡುಗೆ ಮಾಡಲು ಕುಕ್ಕರ್ ಅನ್ನು ಬಳಸಬಾರದು. ಏಕೆಂದರೆ ಅವು ಮುದ್ದೆಯಾಗಬಹುದು, ಅದು ತಿನ್ನಲು ರುಚಿಯಾಗಿರುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ