ಹಾಗಲಕಾಯಿ ಯಾರೆಲ್ಲ ತಿನ್ನಬಾರದು ಎಂಬುದರ ಬಗ್ಗೆ ಗೊತ್ತಿದೆಯೇ ನಿಮಗೆ…?

ಗುರುವಾರ, 14 ಡಿಸೆಂಬರ್ 2017 (07:48 IST)
ಬೆಂಗಳೂರು: ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವೂಂದು ಸಂದರ್ಭಗಳಲ್ಲಿ ಇದನ್ನು ಅಗತ್ಯಕ್ಕಿಂತ ಜಾಸ್ತಿ ಸೇವಿಸುವುದರಿಂದ  ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ.


ಯಾವಾಗಲು ಕಡು ಹಸಿರು ಬಣ್ಣದ ಹಾಗಲಕಾಯಿಯನ್ನೆ ಉಪಯೋಗಿಸಿ. ನೀಲಿ ಅಥವಾ ಕೇಸರಿ ಬಣ್ಣದ ಕಲೆಗಳಿರುವ ಹಾಗಲಕಾಯಿ ತಿನ್ನಬೇಡಿ. ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ತಿಂದರೆ ಅದರಲ್ಲಿರುವ ಮೊಮೊಕೈರಿನ್ ನಿಂದ ಗರ್ಭಾಪಾತವಾಗುತ್ತದೆ. ಫರ್ಟಿಲಿಟಿ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿರುವ ಮಹಿಳೆ ಅಥವಾ ಪುರುಷರು ಇದನ್ನು ಸೇವಿಸಬಾರದು. ಯಾಕೆಂದರೆ ಇದರಿಂದ ಔಷಧಿ ಪ್ರಭಾವ ಕಡಿಮೆಯಾಗುತ್ತದೆ. ಹಾಗಲಕಾಯಿ ಜಾಸ್ತಿ ತಿನ್ನುವುದರಿಂದ ಲಿವರ್ ನಲ್ಲಿ ಎಂಜಾಯಿಮ್ಸಾ ಹೆಚ್ಚಾಗಿ ಲಿವರ್ ಇನ್ ಫೆಕ್ಷನ್ ಆಗುವ ಸಾಧ್ಯತೆ ಇದೆ.


ಹೆಚ್ಚು ಹಾಗಲಕಾಯಿ ಸೇವಿಸುವುದರಿಂದ  ಮುಟ್ಟಿನ ಸಮಸ್ಯೆ ಇರುವವರಿಗೆ ಪಿರಿಯಡ್ಸ್ ಸಂದರ್ಭದಲ್ಲಿ ಅಧಿಕ ರಕ್ತಸ್ರಾವವಾಗುತ್ತದೆ. ಹೆಚ್ಚು ಹಾಗಲಕಾಯಿ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ಉಂಟಾಗುತ್ತದೆ. ಇದನ್ನು ಸೇವಿಸುವುದರಿಂದ ಸಕ್ಕರೆ ಅಂಶ ನಾರ್ಮಲ್ ಗಿಂತಲೂ ಕಡಿಮೆಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ