ಬೆಂಗಳೂರು : ಕ್ಯಾರೆಟ್ ನಿಂದ ಪಲ್ಯ, ಸಾಂಬಾರು ಹಲವು ಬಗೆಯ ಅಡುಗೆಗಳನ್ನು ಮಾಡಬಹುದು. ಅದೇರೀತಿ ಕ್ಯಾರೆಟ್ ನಿಂದ ತಯಾರಿಸಿದ ಉಪ್ಪಿನಕಾಯಿ ಕೂಡ ಊಟದ ರುಚಿಯನ್ನು ಹೆಚ್ಚಿಸುತ್ತದೆ.
ಬೇಕಾಗುವ ಸಾಮಾಗ್ರಿಗಳು : ½ ಕಪ್ ಕ್ಯಾರೆಟ್ ಪೀಸ್, ¼ ಚಮಚ ಹುರಿದ ಮೆಂತ್ಯ ಪುಡಿ, ¼ ಚಮಚ ಅರಿಶಿನ, 1/ ಚಮಚ ಜೀರಿಗೆ ಪುಡಿ, 1 ಚಮಚ ಉಪ್ಪು, ನಿಂಬೆ ರಸ, 1 ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಎಣ್ಣೆ, ¼ ಚಮಚ ಸಾಸಿವೆ, ಚಿಟಿಕೆ ಇಂಗು.
ಮಾಡುವ ವಿಧಾನ : ಕ್ಯಾರೆಟ್ ಪೀಸ್ ಗೆ ಮೆಂತ್ಯ ಪುಡಿ, ಅರಿಶಿನ, ಜೀರಿಗೆ ಪುಡಿ, ಉಪ್ಪು, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಇಂಗು ಹಾಕಿದ ಒಗ್ಗರಣೆ ಈ ಕ್ಯಾರೆಟ್ ಮಿಶ್ರಣಕ್ಕೆ ಹಾಕಿದರೆ ಕ್ಯಾರೆಟ್ ಉಪ್ಪಿನಕಾಯಿ ರೆಡಿ.