ಇದ್ದಿಲಿನಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಗೊತ್ತಾ?
ಶನಿವಾರ, 29 ಆಗಸ್ಟ್ 2020 (10:37 IST)
ಬೆಂಗಳೂರು : ಇದ್ದಿಲು ಕೂದಲು ಹಾಗೂ ಚರ್ಮಕ್ಕೆ ವರದಾನವಾಗಿದೆ. ಇದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಬಹುದು. ಇದ್ದಿಲಿನಿಂದ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.
ಇದ್ದಿಲು ಪುಡಿ ½ ಚಮಚ, ಅಲೋವೆರಾ ಜೆಲ್ 1 ಚಮಚ, ಟೀ ಟ್ರೀ ಆಯಿಲ್ 1 ಹನಿ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ 2 ಬಾರಿ ಬಳಸಿ. ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತದೆ.