ಆಮ್ಲೇಟ್ ಗ್ರೇವಿ ಮಾಡುವುದು ಹೇಗೆ ಗೊತ್ತಾ?

ಶನಿವಾರ, 27 ಜೂನ್ 2020 (08:35 IST)
Normal 0 false false false EN-US X-NONE X-NONE

ಬೆಂಗಳೂರು : ಆಮ್ಲೇಟ್ ಎಂದರೆ ಎಲ್ಲರಿಗೂ ಇಷ್ಟ. ಈ ಆಮ್ಲೇಟ್ ನಿಂದ ರುಚಿಕರವಾದ ಗ್ರೇವಿ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 4, ಈರುಳ್ಳಿ 2, ಹಸಿಮೆಣಸಿನ ಕಾಯಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಅರಶಿನ ಪುಡಿ ¼ ಚಮಚ, ಮೆಣಸಿನ ಪುಡಿ, ದನಿಯಾ ಪುಡಿ 2 ಚಮಚ, ಜೀರಿಗೆ ಪುಡಿ 1 ಚಮಚ, ಗರಂ ಮಸಾಲ ½ ಚಮಚ, ಟೊಮೆಟೊ ಪೇಸ್ಟ್ ½ ಕಪ್, ತೆಂಗಿನ ಹಾಲು 1 ಕಪ್, ಕೊತ್ತಂಬರಿ ಸೊಪ್ಪು, ಎಣ್ಣೆ, ಸಾಸಿವೆ, ಕರಿಬೇವು, ಉಪ್ಪು.

ಮಾಡುವ ವಿಧಾನ : ಮೊದಲಿಗೆ ಮೊಟ್ಟೆ, ಈರುಳ್ಳಿ, ಹಸಿಮೆಣಸಿನಕಾಯಿ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಆಮ್ಲೇಟ್ ತಯಾರಿಸಿಕೊಳ್ಳಿ. ಈ ಆಮ್ಲೇಟ್ ನ್ನು ಸಣ್ಣ ಸಣ್ಣ ಪೀಸ್ ಮಾಡಿಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ, ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಅದಕ್ಕೆ ಶುಂಠಿಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಹಾಕಿ 5 ನಿಮಿಷ ಫ್ರೈ ಮಾಡಿ. ಅದಕ್ಕೆ ದನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ, ಅರಶಿನ ಪುಡಿ, ಖಾರದ ಪುಡಿ, ಹಾಕಿ ಮಿಕ್ಸ್ ಮಾಡಿ, ತೆಂಗಿನ ಹಾಲು, ಉಪ್ಪು ಹಾಕಿ ಚೆನ್ನಾಗಿ ಕುದಿಸಿ ಕೊನೆಯಲ್ಲಿ ಆಮ್ಲೇಟ್ ಪೀಸ್ ಗಳನ್ನು ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪು ಹಾಕಿದರೆ ಆಮ್ಲೇಟ್ ಗ್ರೇವಿ ರೆಡಿ.   

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ