ಕೋಕೋಪೀಟ್ ನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಗೊತ್ತಾ?

ಸೋಮವಾರ, 25 ನವೆಂಬರ್ 2019 (06:18 IST)
ಬೆಂಗಳೂರು : ಗಿಡಗಳು ಚೆನ್ನಾಗಿ ಬೆಳೆಯಲು ಕೋಕೋ ಪೀಟ್ ನ್ನು ಬಳಸುತ್ತೇವೆ. ಈ ಕೋಕೋಪೀಟ್ ನ್ನು ಮನೆಯಲ್ಲಿಯೇ ತಯಾರಿಸಿ ಬಳಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.



ಕೋಕೋ ಪೀಟ್ ನ್ನು ತೆಂಗಿನ ಕಾಯಿ ಮೇಲಿರುವ ಸಿಪ್ಪೆಯಿಂದ ತಯಾರಿಸುತ್ತಾರೆ. ಈ ಕೋಕೋ ಪೀಟ್ ನ್ನು ಗಿಡಗಳಿಗೆ ಬಳಸುವುದರಿಂದ ಮಣ್ಣು ಮೃದುವಾಗಿ ಬೇರುಗಳು ಬಿಡಲು ಸಹಾಯಕವಾಗುತ್ತದೆ. ಇದರಿಂದ ಬೇಗ ಮೊಳಕೆ ಬಂದು ಗಿಡ ಚೆನ್ನಾಗಿ ಬೆಳೆಯುತ್ತದೆ.


ತೆಂಗಿನಕಾಯಿ ಸಿಪ್ಪೆಯನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಬಳಿಕ ಒಂದು ಪ್ಲೇಟ್ ಗೆ ಹಾಕಿ ಅದರಲ್ಲಿರುವ ನಾರುಗಳನ್ನು ತೆಗೆದು ಸಿಪ್ಪೆಯ ಪುಡಿಗೆ ನೀರನ್ನು ಬೇರೆಸಿ ಮುದ್ದೆ ಮಾಡಿಕೊಳ್ಳಿ. ಇದಕ್ಕೆ ಕೋಕೋಪೀಟ್ ಎನ್ನುತ್ತಾರೆ. ಇದನ್ನು ಗಿಡಕ್ಕೆ ಹಾಕಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ