ಪುರುಷರು ಗಡ್ಡ ಬೆಳೆಸಿದರೆ ಏನಾಗುತ್ತದೆ ಗೊತ್ತಾ?

ಭಾನುವಾರ, 5 ಮೇ 2019 (07:22 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪುರುಷರು ಗಡ್ಡ ಬೆಳೆಸುವುದು ಒಂದು ಸ್ಟೈಲ್ ಆಗಿ ಬಿಟ್ಟಿದೆ. ನಮ್ಮ ಹಿರಿಯರು  ಗಡ್ಡ ಬೆಳೆದ ತಕ್ಷಣ ಅದನ್ನು  ಶೇವ್ ಮಾಡಿಕೊಳ್ಳಬೇಕು. ಇಲ್ಲವಾದರೆ ದರಿದ್ರ ನಮ್ಮ ಬೆನ್ನು ಹತ್ತುತ್ತವೆ  ಎಂದು ಹೇಳುತ್ತಾರೆ. ಆದರೆ ವಿಜ್ಞಾನಿಗಳು ಮಾತ್ರ ಪುರುಷರು ಗಡ್ಡ ಬೆಳೆಸಿದರೆ  ಅದರಿಂದ ಅನೇಕ ಲಾಭವಿದೆ ಎಂದು ತಿಳಿಸಿದ್ದಾರೆ.




ಸಂಶೋಧನೆಯೊಂದರ ಪ್ರಕಾರ ಗಡ್ಡ 95% ಯು.ವಿ  ಕಿರಣ ತಡಿದು ಮುಖಾನ ಸುಡೋದ್ರಿಂದ ಕಾಪಾಡತ್ತೆ. ಇದರಿಂದ ಮುಖ ಬೇಗ ಸುಕ್ಕಾಗಲ್ಲ, ಕಪ್ಪಾಗಲ್ಲ. ಸದಾ ಯಂಗ್ ಆಗಿ ಕಾಣಿಸುತ್ತಾರೆ. ಅಷ್ಟೇ ಅಲ್ಲ, ಚರ್ಮದ ಕ್ಯಾನ್ಸರ್ ಬರೋ ಸಾಧ್ಯತೆ ಕಡಿಮೆ ಆಗತ್ತದೆಯಂತೆ.


ಅಲ್ಲದೇ ಮೀಸೆ ಮೂಗಿನ ಒಳಗೆ ಹೋಗೋ ಧೂಳು, ಬ್ಯಾಕ್ಟೀರಿಯಾಗಳನ್ನ ತಡೆಯುತ್ತದೆ, ಹಾಗೇನೇ ಗಡ್ಡ ಬಾಯಿ, ಮುಖದ್ಮೇಲೆ ಕುಳಿತುಕೊಳ್ಳುವ  ಬ್ಯಾಕ್ಟೀರಿಯಾದಿಂದ ಕಾಪಾಡತ್ತಂತೆ. ಆದರೆ ಅವುಗಳನ್ನು ಯಾವಾಗಲೂ ಸ್ವಚ್ಚವಾಗಿಟ್ಟುಕೊಳ್ಳಬೇಕಂತೆ. ಹಾಗೇ ಗಡ್ಡದ ಕೆಳಗಡೆ ಇರೋ ಚರ್ಮ ತುಂಬಾ ಸಾಫ್ಟಾಗಿರತ್ತೆ.  ಇದನ್ನು ಶೇವ್ ಮಾಡಿದರೆ  ಮೊಡವೆ ಮೂಡುವ ಸಂಭವವಿರುತ್ತದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ