ಬೆಂಗಳೂರು : ಕೆಲವರಿಗೆ ಊಟ ಆದ ಬಳಿಕ ಹಣ್ಣು ತಿಂದು ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಇದು ಆರೋಗ್ಯಕ್ಕೆ ಉತ್ತವೇ? ಅಲ್ಲವೇ? ಎಂಬುದನ್ನು ಮೊದಲು ತಿಳಿಯಿರಿ.
ಊಟ ಆದ ಮೇಲೆ ಹಣ್ಣು ತಿಂದರೆ ಅದು ಆರೋಗ್ಯಕ್ಕೆ ಉತ್ತಮ. ಈ ಹಣ್ಣುಗಳು ಜೀರ್ಣ ಕ್ರಿಯೆಗೆ ಸಹಕಾರಿಯಾಗುತ್ತದೆ. ಅಲ್ಲದೇ ದೇಹಕ್ಕೆ ಪೋಷಕಾಂಶಗಳು ಅಧಿಕವಾಗಿ ಸಿಗುತ್ತದೆ.
ಆದರೆ ಹಣ್ಣು ತಿಂದ ಬಳಿಕ ನೀರು ಮತ್ತು ಹಾಲನ್ನು ಮಾತ್ರ ಕುಡಿಯಬಾರದು. ಇದರಿಂದ ಹಣ್ಣಿನಲ್ಲಿರುವ ಆ್ಯಸಿಡ್ ಅಂಶಗಳು ನೀರಿನೊಂದಿಗೆ ಬೆರೆತು ಪಚನ ಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ. ಅಲ್ಲದೇ ಗ್ಯಾಸ್ಟ್ರಿಕ್ ಸಮಸ್ಯೆಯನ್ನುಂಟು ಮಾಡುತ್ತದೆ. ಹಾಗೇ ಕೆಲವೊಮ್ಮೆ ಲೂಸ್ ಮೋಷನ್ ಉಂಟಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.