ಊಟ ಮಾಡಿದ ತಕ್ಷಣ ಬಿಸಿಲಿಗೆ ಹೋಗುವುದರಿಂದ ಏನಾಗುತ್ತದೆ ಗೊತ್ತಾ?
ಗುರುವಾರ, 18 ಫೆಬ್ರವರಿ 2021 (06:58 IST)
ಬೆಂಗಳೂರು : ಊಟ ಮಾಡಿದ ತಕ್ಷಣ ಕೆಲವರು ಕೆಲಸಕ್ಕೆ ಹಾಗೂ ಮಕ್ಕಳು ಆಟವಾಡಲು ಬಿಸಿಲಿಗೆ ಹೋಗುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಇದರಿಂದ ಆರೋಗ್ಯ ಸಮಸ್ಯೆ ಕಾಡುತ್ತದೆ. ಅದು ಏನೆಂಬುದನ್ನು ತಿಳಿದುಕೊಳ್ಳಿ.
ಊಟ ಮಾಡಿದ ತಕ್ಷಣ ಬಿಸಿಲಿಗೆ ಹೋಗುವುದರಿಂದ ದೇಹದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಆಹಾರ ಜೀರ್ಣವಾದರೂ ಅದು ಅಂಗಗಳಿಗೆ ಸರಿಯಾಗಿ ತಲುಪುವುದಿಲ್ಲ. ರಕ್ತ ಪರಿಚಲನೆ ಮತ್ತು ನರಗಳ ಚಲನೆಯಲ್ಲಿ ಸಮಸ್ಯೆಯಾಗುತ್ತದೆ.