ಉತ್ತಮ ಆರೋಗ್ಯಕ್ಕಾಗಿ ರಾಕುಲ್ ಪ್ರೀತ್ ಏನು ತಿನ್ನುತ್ತಾರೆ ಗೊತ್ತೇ?

ಗುರುವಾರ, 12 ಆಗಸ್ಟ್ 2021 (12:39 IST)
ದಿನೇ ದಿನೇ ಹೆಚ್ಚಾಗುತ್ತಿರುವ ಕೋವಿಡ್ -19 ರೋಗದಿಂದ ನಾವು ನಮ್ಮನ್ನು ಕಾಪಾಡಿಕೊಳ್ಳಬೇಕಾಗಿರುವುದು ತುಂಬಾ ಅವಶ್ಯಕವಾಗಿದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಏಕೈಕ ಮಾರ್ಗವೆಂದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಬಳಪಡಿಸಿಕೊಳ್ಳುವುದು.

ಇಂತಹ ಸಂದರ್ಭದಲ್ಲಿ ಯಾವ ರೀತಿಯ ಆಹಾರವನ್ನು ಸೇವಿಸಿದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಅನೇಕರಲ್ಲಿ ಅನೇಕ ಗೊಂದಲಗಳಿರುವುದು ಸಹಜವಾದ ಸಂಗತಿ. ಇತ್ತೀಚೆಗೆ, ನಟಿ ರಾಕುಲ್ ಪ್ರೀತ್ ಸಿಂಗ್ ಇನ್ಸ್ಟಾಗ್ರಾಮ್ನಲ್ಲಿ ಆಸಕ್ತಿದಾಯಕ ಪೌಷ್ಟಿಕ ಆಹಾರ ತಿನ್ನುತ್ತಿರುವಂತಹ ಒಂದು ಫೋಟೋ ಹಂಚಿಕೊಂಡಿದ್ದಾರೆ.
ಅವರು ವಿವಿಧ ತರಕಾರಿಗಳನ್ನು ಒಂದು ದೊಡ್ಡ ಬಟ್ಟಲಿನಲ್ಲಿ ಹಾಕಿಕೊಂಡು ಸೇವಿಸುತ್ತಿರುವುದನ್ನು ನೋಡಬಹುದಾಗಿದೆ. "ನನ್ನ ಸಿರಿಧಾನ್ಯಗಳ ಬಟ್ಟಲಿನಲ್ಲಿ ತರಕಾರಿಗಳನ್ನು ಹಾಕಿಕೊಂಡು ತಿನ್ನುತ್ತಿದ್ದೇನೆ. ಮುನ್ಮುನ್ ಗನೇರಿವಾಲ್ರಿಗೆ ತುಂಬಾ ಧನ್ಯವಾದಗಳು. ನಾನು ಇತ್ತೀಚೆಗೆ ನನ್ನ ಆಹಾರ ಬದಲಾಯಿಸಿದೆ ಮತ್ತು ನನ್ನ ದೇಹ ತುಂಬಾ ಹಗುರ ಮತ್ತು ಆರೋಗ್ಯವಾಗಿ ಅನ್ನಿಸುತ್ತಿದೆ” ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
'ಸರ್ದಾರ್ ಕಾ ಗ್ರ್ಯಾಂಡ್ಸನ್' ಚಿತ್ರದ ನಟಿ ರಾಕುಲ್ ತನ್ನ ಪೌಷ್ಟಿಕತಜ್ಞರಾದ ಮುನ್ಮುನ್ ಗನೇರಿವಾಲ್ರಲ್ಲಿ ಉತ್ತಮ ಸ್ನೇಹಿತನನ್ನು ಕಂಡುಕೊಂಡಿದ್ದು, ರಾಕುಲ್ ಸದಾ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವಿಸಲು ಸಹಾಯ ಮಾಡುತ್ತಾರೆ.
ರಾಕುಲ್ ಮತ್ತು ಆಕೆಯ ಪೌಷ್ಟಿಕತಜ್ಞರು ಇಬ್ಬರು ಸರಿಯಾಗಿ ಆಹಾರ ಪದ್ದತಿ ಎಂದರೆ ಪೌಷ್ಟಿಕ ಆಹಾರ ತಿನ್ನುವುದು ಆಗಿದ್ದು, ಆಹಾರ ತ್ಯಜಿಸುವುದು ಅಲ್ಲ ಎಂದು ನಂಬುತ್ತಾರೆ. ನಟಿ ಸಹ ತನ್ನ ಅಭಿಮಾನಿಗಳಿಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಆರೋಗ್ಯಕರ ಪಾಕ ವಿಧಾನ ಪ್ರಯತ್ನಿಸುವಂತೆ ಕೋರಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯಕ್ಕೆ ಆಗುವ ಲಾಭಗಳು
ಸಿರಿಧಾನ್ಯಗಳು ನಿಯಾಸಿನ್ ಒಳಗೊಂಡಿದ್ದು, ಇದು ನಿಮ್ಮ ದೇಹವು 400ಕ್ಕೂ ಹೆಚ್ಚು ಕಿಣ್ವ ಪ್ರತಿಕ್ರಿಯೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ವೆಬ್ ಎಂಡಿ ತಿಳಿಸಿದೆ. ಆರೋಗ್ಯಕರ ಚರ್ಮ ಮತ್ತು ಅಂಗಾಂಗಗಳ ಕಾರ್ಯನಿರ್ವಹಣೆಗೆ ಇದು ಮುಖ್ಯವಾಗಿದೆ. ಇದಲ್ಲದೆ, ವಿಶೇಷವಾಗಿ ಕಪ್ಪು ಬಣ್ಣದ ಸಿರಿಧಾನ್ಯಗಳು ಬೀಟಾ ಕ್ಯಾರೋಟಿನ್ ಹೊಂದಿರುತ್ತವೆ. ಈ ಸಿರಿಧಾನ್ಯಗಳು ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ ಮತ್ತು ಜೀವಸತ್ವ ಎ ಹೊಂದಿರುತ್ತದೆ ಹಾಗೂ ಇದು ನಿಮ್ಮ ಕಣ್ಣುಗಳ ಆರೋಗ್ಯ ಕಾಪಾಡುತ್ತದೆ.
ಅಲ್ಲದೆ, ಮಧುಮೇಹ ನಿಯಂತ್ರಿಸಲು, ಜೀರ್ಣಕ್ರಿಯೆಗೆ ಮತ್ತು ನಿಮ್ಮ ಹೃದಯದ ಆರೋಗ್ಯ ರಕ್ಷಿಸಲು ಸಿರಿಧಾನ್ಯಗಳು ಸಹಾಯ ಮಾಡುತ್ತವೆ. ರಾಕುಲ್ ತನ್ನ ಜೀವನವನ್ನು ಹೆಚ್ಚು ಆರೋಗ್ಯಕರವಾಗಿಸುವಲ್ಲಿ ತನ್ನ ಪೌಷ್ಟಿಕತಜ್ಞರ ಪಾತ್ರ ತುಂಬಾ ಇದೆ ಎಂದು ಅನೇಕ ಬಾರಿ ಹೇಳಿಕೊಂಡಿದ್ದಾರೆ.
ರಾಕುಲ್ ಇತ್ತೀಚೆಗೆ ಸಸ್ಯಾಹಾರಿ ಆಗಿದ್ದು, ಇತ್ತೀಚೆಗೆ ಮತ್ತೊಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ರುಚಿಕರವಾದ ದಕ್ಷಿಣ ಭಾರತದ ಉಪಹಾರವಾದ ರಾಗಿ ದೋಸೆ ಮತ್ತು ಸಾಂಬಾರ್ ತಿನ್ನುತ್ತಿರುವುದನ್ನು ಕಾಣಬಹುದಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ