2011ರಲ್ಲಿ ಅಧ್ಯಯನ ಮಾಡಿದ 24 ಬ್ರಾಂಡ್‌ಗಳ ಟೂತ್‌ಪೇಸ್ಟ್‌ಗಳ ಪೈಕಿ, ಏಳು ಬ್ರಾಂಡ್‌ಗಳಾದ ಕಾಲ್ಗೇಟ್ ಹರ್ಬಲ್, ಹಿಮಾಲಯಾ, ನೀಮ್ ಪೇಸ್ಟ್, ನೀಮ್ ತುಲಸಿ, ಆರ್‌ಎ ಥರ್ಮೋಸೀಲ್, ಸೆನ್ಸೋಫಾರ್ಮ್ ಮತ್ತು ಸ್ಟೋಲೈನ್ ಟೂತ್‌ಪೇಸ್ಟ್‌ಗಳಲ್ಲಿ ನಿಕೋಟಿನ್ ಅಂಶವನ್ನು ಹೊಂದಿರುವುದು ಪತ್ತೆಯಾಗಿದೆ.
ಪರೀಕ್ಷೆ ಮಾಡಿದ ಹಲ್ಲುಪುಡಿಗಳ ಪೈಕಿ, ಆರು ಹಲ್ಲುಪುಡಿಗಳಾದ ಡಾಬರ್ ರೆಡ್, ವೀಕೋ, ಮುಸಾಕಾ ಗುಲ್, ಪಯೋಕಿಲ್, ಉನಾಡೆಂಟ್ ಮತ್ತು ಅಲ್ಕಾ ದಂತಮಂಜನ್ ನಿಕೋಟಿನ್ ಹೊಂದಿರುವುದು ಪತ್ತೆಯಾಗಿದೆ. ಪಯೋಕಿಲ್ ಅತ್ಯಧಿಕ 16 ಎಂಜಿ ತಂಬಾಕನ್ನು ಹೊಂದಿದೆ. ವ್ಯಕ್ತಿಯೊಬ್ಬ 8 ಸಿಗರೇಟುಗಳನ್ನು ಸೇದಿದ ಬಳಿಕ ಸೇವಿಸುವ ತಂಬಾಕಿಗೆ ಇದು ಸಮನಾಗಿದೆ ಎಂದು ಅಗರವಾಲ್ ಹೇಳಿದ್ದಾರೆ.