ತೂಕ ಇಳಿಸಲು ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ಮಂಗಳವಾರ, 17 ಆಗಸ್ಟ್ 2021 (14:37 IST)
Exercise Mistakes: ಪ್ರತಿಯೊಂದಕ್ಕೂ ಒಂದು ಮೀತಿ ಇರುತ್ತದೆ, ನಾವು ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಆ ಮಿತಿಯನ್ನು ಮೀರಬಾರದು. ಎಲ್ಲವನ್ನು ನಿಯಮಾನುಸಾರ ಮಾಡುವುದು ಅಗತ್ಯವಾಗಿದೆ.

ತೂಕ ಇಳಿಸುವುದು ಹೆಚ್ಚಿನ ಜನರ ಕನಸು. ಅದಕ್ಕಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ. ತೂಕ ಇಳಿಸಲು ವ್ಯಾಯಾಮ ಮಾಡುವುದು ಕಡ್ಡಾಯ. ನೀವು ಸ್ವಲ್ಪ ಪ್ರಮಾಣದಲ್ಲಿಯಾದರೂ ಸರಿ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ವ್ಯಾಯಾಮ ಅವಶ್ಯಕ. ನೀವು ಸರಳ ವ್ಯಾಯಾಮ ಮಾಡಿ ಅಥವಾ ಹೆಚ್ಚಿನ ಭಾರವಿರುವ ಅಥವಾ ಕ್ಲಿಷ್ಟಕರವಾದ ವ್ಯಾಯಾಮವನ್ನಾದರೂ ಮಾಡಿ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡಬೇಕು. ಇನ್ನು ನೀವು ಸಾಕಷ್ಟು ವ್ಯಾಯಾಮವನ್ನು ಮಾಡುತ್ತಿದ್ದರೂ ನಿಮ್ಮ ದೇಹದ ತೂಕ ಇಳಿಕೆಯಾಗದಿದ್ದಲ್ಲಿ ನಿಮ್ಮ ವ್ಯಾಯಾಮ ಕ್ರಮದಲ್ಲಿ ಯಾವುದೋ ತಪ್ಪುಗಳನ್ನು ಮಾಡುತ್ತಿದ್ದೀರಾ ಎಂದು ಅರ್ಥ. ನೀವು ಮಾಡುವ ಆ ತಪ್ಪುಗಳು ನಿಮ್ಮ ದೇಹದ ತೂಕದ ಮೇಲೆ ಪರಿಣಾಮ ಬೀರುತ್ತದೆ. ಯಾವುದೂ ಆ ವ್ಯಾಯಾಮಗಳು ಎಂಬ ಮಾಹಿತಿ ಇಲ್ಲಿದೆ. ಅವುಗಳ ಬಗ್ಗೆ ತಿಳಿದುಕೊಂಡು ನಿಮ್ಮ ವ್ಯಾಯಾಮದಲ್ಲಿ ರೂಢಿಸಿಕೊಳ್ಳಿ.
ಆಹಾರ ಕ್ರಮ ಸರಿಯಾಗಿರಬೇಕು
ನೀವು ದೇಹದ ತೂಕ ಇಳಿಸಲು ನಿರ್ಧರಿಸಿದ ಮೇಲೆ ನಿರ್ಧಿಷ್ಟವಾದ ಆಹಾರ ಕ್ರಮವನ್ನು ಅನುಸರಿಸಬೇಕು. ತೂಕ ಇಳಿಯಲು ಕಟ್ಟುನಿಟ್ಟಾದ ಆಹಾರ ಕ್ರಮ ಮತ್ತು ವ್ಯಾಯಾಮ ಅತಿ ಮುಖ್ಯವಾಗುತ್ತದೆ. ನೀವು ನಿಮ್ಮ ದೇಹಕ್ಕೆ ಮತ್ತು ನೀವು ಮಾಡುವ ವ್ಯಾಯಾಮಕ್ಕೆ ತಕ್ಕಂತೆ ಪೋಷಕಾಂಶವಿರುವ ಆಹಾರ ಸೇವನೆ ಮಾಡಲೇಬೇಕು. ಆದರೆ ನಿಮ್ಮ ಆಹಾರ ಅಗತ್ಯಕ್ಕಿಂತ ಹೆಚ್ಚಿರಬಾರದು. . ನಿಮಗೆ ತಿಳಿಯದೇ ಈ ತಪ್ಪು ಮಾಡುತ್ತಿರಬಹುದು. ಸಾಕಷ್ಟು ಪೌಷ್ಟಿಕ ಅಹಾರ ಸೇವಿಸುವುದು ಮತ್ತು ಅನಗತ್ಯವಾದ, ಕ್ಯಾಲೋರಿ ಮತ್ತು ಕೊಬ್ಬನ್ನು ಹೆಚ್ಚಿಸುವ ಆಹಾರಗಳನ್ನು ತ್ಯಜಿಸುವುದು ಬಹಳ ಮುಖ್ಯ.
ವ್ಯಾಯಾಮದಲ್ಲಿ ಶ್ರಮ ಅಗತ್ಯ.

ನೀವು ವ್ಯಾಯಾಮ ಮಾಡುವುದು ಎಂದರೆ ಅಷ್ಟು ಸುಲಭವಲ್ಲ. ಸುಮ್ಮನೆ ಆರೋಗ್ಯವನ್ನು ಚನ್ನಾಗಿ ಇಟ್ಟುಕೊಳ್ಳಲು ಮಾಡುತ್ತೀನಿ ಎನ್ನುವವರು ಯಾವುದೇ ವಿಧದ ವ್ಯಾಯಾಮ ಮಾಡಿದರೂ ನಡೆಯುತ್ತದೆ. ಆದರೆ ದೇಹದ ತೂ ಇಳಿಸಿಕೊಳ್ಳಲು ಮಾತ್ರ ಹೆಚ್ಚಿನ ಶ್ರಮದ ಅಗತ್ಯವಿದೆ. ಹೆಚ್ಚು ತೂಕ ಎತ್ತುವುದು, ಕಷ್ಟಕರ ಎನಿಸುವ ವ್ಯಾಯಾಮಗಳನ್ನು ಮಾಡುವುದು ಅನಿವಾರ್ಯ. ಈ ವ್ಯಾಯಾಮಗಳು ಸ್ವಲ್ಪ ಶ್ರಮದಾಯಕ ಎಂದು ಅನಿಸುತ್ತದೆ ಆದರೆ ಶ್ರಮವಿಲ್ಲದೇ ನಿಮ್ಮ ತೂಕ ಇಳಿಕೆ ಅಷ್ಟು ಸುಲಭವಲ್ಲ. ನಿಮ್ಮ ಸಾಮರ್ಥ್ಯಕ್ಕೆ ತಕ್ಕ ವ್ಯಾಯಾಮಗಳನ್ನು ನೀವು ನಿತ್ಯವೂ ಮಾಡಬೇಕು.
ಚನ್ನಾಗಿ ನಿದ್ರೆ ಮಾಡಬೇಕು.
ನಮ್ಮ ಆರೋಗ್ಯದ ದೃಷ್ಟಿಯಿಂದ ನಿದ್ದೆ ಹೆಚ್ಚು ಮುಖ್ಯವಾಗುತ್ತದೆ. ಹೇಗೆ ಆರೋಗ್ಯಕ್ಕೆ ನಿದ್ದೆ ಎಷ್ಟು ಅಗತ್ಯವೋ ತೂಕ ಇಳಿಕೆಯ ಪ್ರಯತ್ನಕ್ಕೂ ಅಷ್ಟೇ ಅಗತ್ಯವಿದೆ. ಅಧ್ಯಯನಗಳ ಪ್ರಕಾರ ನೀವು ನಿದ್ದೆಯನ್ನು ಸರಿಯಾಗಿ ಮಾಡದಿದ್ದಲ್ಲಿ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇನ್ನು ತೂಕ ಇಳಿಸುವ ಪ್ರಯತ್ನದಲ್ಲಿರುವಾಗ ಸರಿಯಾಗಿ ನಿದ್ದೆ ಮಾಡುವ ಅವಶ್ಯಕತೆ ಇದೆ. ಆದಷ್ಟೂ ನಿದ್ದೆಗೆಡುವುದನ್ನ ಬಿಟ್ಟು ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುವ ಅಭ್ಯಾಸ ಬೆಳೆಸಿಕೊಳ್ಳಿ. ಒಬ್ಬ ಮನುಷ್ಯನಿಗೆ ದಿನಕ್ಕೆ ಸುಮಾರು 8 ಗಂಟೆಗಳ ನಿದ್ದೆಯ ಅವಶ್ಯಕತೆಯಿದ್ದು, 6 ಗಂಟೆಗಳ ಕಾಲವಾದರೂ ಗಾಢ ನಿದ್ದೆಯನ್ನು ಮಾಡಬೇಕು. ನಿದ್ದೆ ಚನ್ನಾಗಿ ಆದಲ್ಲಿ ತೂಕ ಇಳಿಯಲು ಸಹಕಾರಿಯಾಗುತ್ತದೆ.
ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಬಾರದು
ಪ್ರತಿಯೊಂದಕ್ಕೂ ಒಂದು ಮಿತಿ ಇರುತ್ತದೆ. ಹಾಗೆಯೇ ದೇಹದ ತೂಕ ಇಳಿಸುವ ಪ್ರಕ್ರಿಯೆಯಲ್ಲಿ ದೇಹವನ್ನು ಹೆಚ್ಚು ದಂಡಿಸುವುದು ಕೂಡ ಸೂಕ್ತವಲ್ಲ. ನೀವು ಹೆಚ್ಚು ಮಿತಿ ಮೀರಿ ವ್ಯಾಯಾಮ ಮಾಡುವುದರಿಂದ ನಿಮ್ಮ ಸ್ನಾಯು ಬೆಳವಣಿಗೆಯಾಗುತ್ತದೆ ಹೊರತು ದೇಹದ ತೂಕ ಕಡಿಮೆಯಾಗುವುದಿಲ್ಲ. ಅಲ್ಲದೇ ಸ್ನಾಯುಗಳ ಬಲ ಹೆಚ್ಚಾದಂತೆ ದೇಹದ ತೂಕ ಕಡಿಮೆಯಾಗುವುದಿಲ್ಲ ಹಾಗಾಗಿ ದೇಹದ ಕೊಬ್ಬು ಮತ್ತು ಸ್ನಾಯುಗಳ ಸಮತೋಲನ ಅಗತ್ಯ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ