ಕ್ಯಾನ್ಸರ್ ತಡೆಗಟ್ಟಬೇಕಾದರೆ ಈ ಆಹಾರಗಳನ್ನು ಸೇವಿಸಬೇಡಿ

ಶನಿವಾರ, 3 ನವೆಂಬರ್ 2018 (09:23 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಕ್ಯಾನ್ಸರ್ ಸದ್ದಿಲ್ಲದೇ ನಮ್ಮ ಜೀವಕ್ಕೆ ಕುತ್ತು ತರುವುದು ಸಾಮಾನ್ಯವಾಗುತ್ತಿದೆ. ಈ ಅಪಾಯಕಾರಿ ಖಾಯಿಲೆಯಿಂದ ದೂರವಿರಬೇಕಾದರೆ ಕೆಲವು ಆಹಾರಗಳನ್ನು ವರ್ಜಿಸುವುದು ಒಳಿತು.
 

ಕೊಳೆತ ತರಕಾರಿ, ಹಣ್ಣು
ತರಕಾರಿ ಅಥವಾ ಹಣ್ಣು ಅರ್ಧ ಕತ್ತರಿಸಿ ಎರಡು ದಿವಸ ಬಿಟ್ಟು ಉಪಯೋಗಿಸುವಾಗ ಬೂಸ್ಟ್ ಅಥವಾ ಕೊಂಚ ಕೊಳೆಯುವುದು ಸಾಮಾನ್ಯ. ಇಂತಹ ಆಹಾರಗಳನ್ನು ಸೇವಿಸಬೇಡಿ. ಇದರಲ್ಲಿ ವಿಷಕಾರಿ ಅಂಶ ಬೆಳೆಯುವ ಸಾಧ‍್ಯತೆ ಹೆಚ್ಚು.

ಸಂಸ್ಕರಿತ ಮಾಂಸ
ಸಂಸ್ಕರಿತ ಮಾಂಸ, ಆಹಾರ ವಸ್ತುಗಳನ್ನು ಉಪಯೋಗಿಸುವುದು ಕಡಿಮೆ ಮಾಡಿ. ಇವುಗಳು ಸುದೀರ್ಘ ಕಾಲ ಬಾಳಿಕೆ ಬರಲು ಬಳಸುವ ರಾಸಾಯನಿಕಗಳು ಕ್ಯಾನ್ಸರ್ ಗೆ ಕಾರಣವಾಗಬಹುದು.

ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಬಿಸಿ ಮಾಡುವುದು
ಪ್ಲಾಸ್ಟಿಕ್ ಪಾತ್ರೆಯಲ್ಲಿ ಆಹಾರ ಬಿಸಿ ಮಾಡುವುದರಿಂದ ಅವುಗಳು ಕ್ಯಾನ್ಸರ್ ಗೆ ಕಾರಣವಾಗಬಲ್ಲ ರಾಸಾಯನಿಕವನ್ನು ಬಿಡುಗಡೆ ಮಾಡುತ್ತವೆ.

ಉಪ್ಪು
ಉಪ್ಪು ಅತಿಯಾದರೆ ವಿಷ. ಅತಿಯಾಗಿ ಉಪ್ಪು ಸೇವಿಸುವುದರಿಂದ ಹೊಟ್ಟೆಯ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಮುಂತಾದ ಸಮಸ್ಯೆ ಬರಬಹುದು.

 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ