ಬೇಸಿಗೆ ಕಾಲದಲ್ಲಿ ಈ ಹಣ್ಣನ್ನು ಹೆಚ್ಚಾಗಿ ಸೇವಿಸಿ ಅನಾರೋಗ್ಯದಿಂದ ದೂರವಿರಿ
ಗುರುವಾರ, 9 ಜನವರಿ 2020 (05:43 IST)
ಬೆಂಗಳೂರು : ಬೇಸಿಗೆಕಾಲದಲ್ಲಿ ಜನರು ಹೆಚ್ಚು ಕಾಯಿಲೆಗೆ ಬೀಳುತ್ತಾರೆ. ಇದನ್ನು ತಡೆಯಲು ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಈ ಹಣ್ಣನ್ನು ಸೇವಿಸಿ.
ಹೌದು. ಕರ್ಬೂಜದಲ್ಲಿ 95% ನೀರಿದೆ. ಆದಕಾರಣ ಬೇಸಿಗೆ ಕಾಲದಲ್ಲಿ ಈ ಹಣ್ಣನ್ನು ಹೆಚ್ಚಾಗಿ ಸೇವಿಸುವುದರಿಂದ ಅನಾರೋಗ್ಯದಿಂದ ದೂರವಿರಬಹುದು. ಪ್ರೋಟೀನ್, ಕಾರ್ಬೊಬೈಡ್ರೆಟ್, ಕಬ್ಬಣಾಂಶ, ವಿಟಮಿನ್ ಎಬಿಸಿ ಅಂಶ ಇದರಲ್ಲಿ ಹೆಚ್ಚಾಗಿ ಇದೆ.
ಇದು ದೇಹವನ್ನು ತಂಪಾಗಿರಿಸುವುದರ ಜೊತೆಗೆ ಹೃದಯದ ಉರಿ, ಮೂತ್ರಪಿಂಡದ ಸಮಸ್ಯೆ ಕಡಿಮೆ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಇದು ಸಹಕಾರಿ. ಬಿಸಿಲಿನ ಹೊಡೆತಕ್ಕೆ ತ್ವಚೆ ಹಾಳಾಗದಂತೆ ಕಾಪಾಡುತ್ತದೆ. ಅಲ್ಲದೇ ಇದು ಶ್ವಾಸಕೋಶದ ಕ್ಯಾನ್ಸರ್ ಹತ್ತಿರವೂ ಸುಳಿಯದಂತೆ ತಡೆಯುತ್ತದೆ. ಹಾಗೇ ಇದರಲ್ಲಿರುವ ರಂಜಕವು ನಿಮ್ಮ ಒತ್ತಡವನ್ನು ದೂರಮಾಡುತ್ತದೆ.