ಅನ್ನ ತಿಂದರೂ ಸುಲಭವಾಗಿ ತೂಕ ಇಳಿಸಬಹುದು: ಇಲ್ಲಿದೆ ಮಾಹಿತಿ..!

ಶನಿವಾರ, 28 ಆಗಸ್ಟ್ 2021 (15:06 IST)
ತೂಕ ಇಳಿಸುವ ವಿಷಯಕ್ಕೆ ಬಂದಾಗ, ಆಹಾರ ತಜ್ಞರು ಅನ್ನ ಸೇವನೆಗೆ ಅಸ್ತು ಎನ್ನುವುದು ಬಹಳ ಅಪರೂಪ. ಸಮತೋಲನ ಕಾಯ್ದುಕೊಂಡರೆ , ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಅನ್ನ ಸೇವಿಸುವ ಖುಷಿಯನ್ನು ಕೂಡ ಅನುಭವಿಸಬಹುದು.

ತೂಕ ಇಳಿಸುವ ಉತ್ಸಾಹದಲ್ಲಿರುವ ಜನರು ಕಾರ್ಬೋಹೈಡ್ರೇಸ್ಗಳ ಕಡೆ ಮುಖ ಮಾಡುವುದು ತೀರಾ ವಿರಳ. ಅದರಲ್ಲೂ ಅನ್ನ ಸೇವನೆಯನ್ನಂತೂ ಬೇಡ ಎನ್ನುವವರೇ ಹೆಚ್ಚು. ಅದು ದೇಹದ ತೂಕವನ್ನು ಹೆಚ್ಚಿಸುತ್ತದೆ ಎಂಬ ಭೀತಿ ಅವರದ್ದು. ಎಲ್ಲ ರೀತಿಯ ಪಲ್ಯ, ಸಾಂಬಾರ್ಗಳ ಜೊತೆ ಹೊಂದಿಕೊಳ್ಳುವ ರುಚಿಯಾದ ಆಹಾರ ಅನ್ನ. ಅದನ್ನು ತ್ಯಜಿಸುವುದು ಎಂದರೆ ಬಹಳಷ್ಟು ಮಂದಿಗೆ ಕಷ್ಟವೇ ಸರಿ. ಆದರೆ ಚಿಂತಿಸಬೇಡಿ, ಅನ್ನ ಸೇವನೆಯ ರೀತಿಯಲ್ಲಿ ಒಂದು ಸಮತೋಲನವಿದ್ದರೆ ಅದು ತೂಕ ಇಳಿಕೆಗೆ ಅಡ್ಡಿಯಾಗದು.
ಅನ್ನ ಸೇವನೆ ಮಾಡುತ್ತಲೇ ದೇಹದ ತೂಕವನ್ನು ಇಳಿಸಿಕೊಳ್ಳುವ ಕೆಲವು ಸಲಹೆಗಳು ಇಲ್ಲಿವೆ..!
ಒಂದು ಬೌಲ್ ಬಿಳಿ ಅನ್ನ ಎಷ್ಟು ಆರೋಗ್ಯಕರ?
ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿರುವವರು ಹೆಚ್ಚಾಗಿ ಪೌಷ್ಟಿಕಾಂಶದ ಮೌಲ್ಯದ ಕಾರಣದಿಂದಾಗಿ ಬಿಳಿ ಅನ್ನದ ಬದಲು ಕೆಂಪಕ್ಕಿ/ಕಂದು ಅಕ್ಕಿಯ ಅನ್ನ ಸೇವನೆ ಆರಂಭಿಸುತ್ತಾರೆ. ಆದರೂ, ಆವಿಯಲ್ಲಿ ಬೇಯಿಸಿದ ಬಿಳಿ ಅನ್ನಕ್ಕೂ ಕೂಡ ಆರೋಗ್ಯದ ಪಟ್ಟಿಯಲ್ಲಿ ಒಳ್ಳೆಯ ಸ್ಥಾನವಿದೆ. ಅದರಲ್ಲಿ ಹೆಚ್ಚಿನ ಕ್ಯಾಲೋರಿಗಳಿದ್ದರೂ ಅದು ಕಡಿಮೆ ಕೊಬ್ಬು ಪ್ರಧಾನವಾಗುಳ್ಳ ವಿಟಮಿನ್ ಬಿ ಗಳನ್ನು ಹೊಂದಿರುತ್ತದೆ.
ಒಂದು ಬೌಲ್ ಬಿಳಿ ಅನ್ನದಿಂದ ತೂಕ ಇಳಿಸುವುದು ಹೇಗೆ?
ತೂಕ ಇಳಿಸುವ ವಿಷಯಕ್ಕೆ ಬಂದಾಗ ಆಹಾರ ತಜ್ಞರು ಅನ್ನ ಸೇವನೆಗೆ ಅಸ್ತು ಎನ್ನುವುದು ಬಹಳ ಅಪರೂಪ. ಸಮತೋಲನ ಕಾಯ್ದುಕೊಂಡರೆ , ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಅನ್ನ ಸೇವಿಸುವ ಖುಷಿಯನ್ನು ಕೂಡ ಅನುಭವಿಸಬಹುದು.
1. ಬೇಯಿಸುವ ವಿಧಾನದ ಬಗ್ಗೆ ಗಮನವಿಡಿ
ಬಿಳಿ ಅನ್ನ ಜನಪ್ರಿಯ ಭಾರತೀಯ ಖಾದ್ಯ ಖೀರ್ ಮತ್ತು ಚೈನೀಸ್ ಫ್ರೈಡ್ರೈಸ್ನಲ್ಲಿ ಬಳಸಲ್ಪಡುತ್ತದೆ. ಈ ಎರಡೂ ತಿನಿಸುಗಳಲ್ಲಿ ಅಧಿಕ ಕ್ಯಾಲೋರಿಗಳು ಇರುತ್ತವೆ. ಅದರಲ್ಲಿ ಆರೋಗ್ಯಕರ ಅಂಶಗಳು ಇರುವುದಿಲ್ಲ. ಅತಿಯಾದ ಎಣ್ಣೆ ಬಳಸದೆ, ಅದೇ ಅನ್ನವನ್ನು ಬೇಯಿಸಿದಾಗ ಅಥವಾ ನೆನೆಸಿ ಆವಿಯಲ್ಲಿ ಬೇಯಿಸಿದಾಗ ನಿಮ್ಮ ಊಟವನ್ನು ಪೂರ್ಣಗೊಳಿಸುವ ಲಘು ಆಹಾರವಾಗುತ್ತದೆ.
2. ಪ್ರಮಾಣದ ಬಗ್ಗೆ ಎಚ್ಚರವಿರಲಿ
ಆರೋಗ್ಯಕರ ಊಟದ ವಿಷಯಕ್ಕೆ ಬಂದಾಗ ಆಹಾರದ ಪ್ರಮಾಣ ಬಹಳ ಮುಖ್ಯ ಎನಿಸಿಕೊಳ್ಳುತ್ತದೆ. ಬಿಳಿ ಅನ್ನದಲ್ಲಿ ಆರೋಗ್ಯಕ್ಕೆ ಲಾಭವಾಗುವ ಅಂಶಗಳು ಇದ್ದರೂ ಕೂಡ ಬಿಳಿ ಅನ್ನದಲ್ಲಿ ಹೆಚ್ಚು ಕ್ಯಾಲೋರಿ ಮತ್ತು ಅಧಿಕ ಕಾರ್ಬ್ ಇದೆ. ಹಾಗಾಗಿ ಅದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸದಿದ್ದರೆ ತೂಕ ಹೆಚ್ಚುವುದು ಖಂಡಿತ.
3. ಇತರ ಕಾರ್ಬ್ ಮತ್ತು ಕೊಬ್ಬಿನ ಜೊತೆ ಸೇವಿಸಬೇಡಿ
ಟೋರ್ಟಿಲ್ಲಾದಂತಹ ಇತರ ಕಾರ್ಬ್ ಮೂಲಗಳೊಂದಿಗೆ ಅಥವಾ ಕೊಬ್ಬುಳ್ಳ ಆಹಾರದ ಜೊತೆ ಬಿಳಿ ಅನ್ನವನ್ನು ಸೇವಿಸಿದಾಗ ಪ್ರತಿಕೂಲ ಪರಿಣಾಮ ಬೀರಬಹುದು. ಆಗ ನೀವು ಅನ್ನ ಸೇವನೆಯ ಪ್ರಮಾಣದಲ್ಲಿ ಸಮತೋಲನ ಕಾಯ್ದುಕೊಂಡರೂ ಕೂಡ ಪ್ರಯೋಜನಕ್ಕೆ ಬರದಿರಬಹುದು. ಅದರಿಂದಾಗಿ ತೂಕ ಹೆಚ್ಚಬಹುದು.
4. ತರಕಾರಿ ಮತ್ತು ತೆಳು ಮಾಂಸದ ಜೊತೆ ಸೇವಿಸಿ
ಬಿಳಿ ಅನ್ನದ ಜೊತೆ ಬೇಯಿಸಿದ ಅಥವಾ ಗ್ರಿಲ್ ಮಾಡಿದ ತರಕಾರಿಗಳನ್ನು , ಸೊಪ್ಪುಗಳನ್ನು ಸೇವಿಸಿದರೆ ಅದು ಆರೋಗ್ಯಕರ ಆಗಬಲ್ಲದು. ಬ್ರೊಕೋಲಿ, ಹಸಿರು ಬಟಾಣಿ , ಫ್ರೆಂಚ್ ಬೀನ್ಸ್, ಕ್ಯಾಪ್ಸಿಕಮ್ ಮತ್ತು ತೆಳು ಮಾಂಸದ ಜೊತೆ, ಬೇಯಿಸಿದ ಅನ್ನವನ್ನು ಸೇವಿಸಿದರೆ ಅದು ಪರಿಪೂರ್ಣ, ಆರೋಗ್ಯಕರ ಆಹಾರ ಆಗಬಲ್ಲದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ