ಹುಟ್ಟುವ ಮಗು ಚುರುಕಾಗಿ, ಬುದ್ದಿವಂತರಾಗಬೇಕು ಎಂದರೆ ಈ ಆಹಾರ ಸೇವಿಸಿ

ಬುಧವಾರ, 25 ಆಗಸ್ಟ್ 2021 (07:05 IST)
ತಾಯ್ತನ ಎಂಬುದು ಪ್ರತಿಯೊಬ್ಬ ಹೆಣ್ಣಿಗೆ ಭಗವಂತ ನೀಡಿರುವ ವರವಾಗಿದ್ದು ಒಂಭತ್ತು ತಿಂಗಳ ಈ ಸುಂದರ ಅನುಭೂತಿಯನ್ನು ಗರ್ಭಾವಸ್ಥೆಯ ಪ್ರಯಾಣದಲ್ಲಿ ಆಸ್ವಾದಿಸುತ್ತಾರೆ. ತನ್ನ ಒಡಲಲ್ಲಿರುವ ತನ್ನದೇ ಕರುಳ ಕುಡಿಯ ಇರುವನ್ನು ಆಕೆ ಪ್ರತಿ ಕ್ಷಣವೂ ಅನುಭವಿಸುತ್ತಿರುತ್ತಾಳೆ. ತನ್ನ ಮಗುವನ್ನು ನೋಡುವ ಕಾತರ ಬಯಕೆ ತುಡಿತ ಕ್ಷಣದಿಂದ ಕ್ಷಣಕ್ಕೆ ಹೆಣ್ಣಿಗೆ ಹೆಚ್ಚುತ್ತಲೇ ಇರುತ್ತದೆ. ಈ ಸಮಯದಲ್ಲಿ ತಾಯಿ ಮಗು ಇಬ್ಬರೂ ಕೂಡ ಆರೋಗ್ಯದಿಂದಿರುವುದು ಹೆಚ್ಚು ಅವಶ್ಯಕ.

ಈ ಸಮಯದಲ್ಲಿ ಪ್ರೊಟೀನ್ ಹಾಗೂ ನ್ಯೂಟ್ರಿನ್ ಭರಿತ ಆಹಾರ ಸೇವನೆಗಳನ್ನು ಮಾಡಬೇಕು. ಮಗುವಿನ ಆಹಾರವು ತಾಯಿಯ ಮೂಲಕವೇ ಬರುವುದರಿಂದ ಮಗುವಿಗೆ ಯಾವ ಆಹಾರ ಅತ್ಯುತ್ತಮವಾದುದು ಎಂಬುದನ್ನು ಆಯ್ಕೆಮಾಡುವ ಅವಕಾಶ ಅಮ್ಮನಿಗಿದೆ.
ಇಂದಿನ ಲೇಖನದಲ್ಲಿ ತಾಯಂದಿರಿಗೆ ಹಾಗೂ ಮಗುವಿಗೆ ಅತ್ಯುತ್ತಮವಾಗಿರುವ ಆಹಾರಗಳ ಪಟ್ಟಿಯನ್ನು ನೀಡುತ್ತಿದ್ದು ಇದರಿಂದ ನಿಮ್ಮ ಮಗುವಿನ ಸಂಪೂರ್ಣ ಬೆಳವಣಿಗೆ ಸಾಧ್ಯವಿದೆ. ಮಗುವಿನ ಮೆದುಳಿನ ಬೆಳವಣಿಗೆಗೆ, ಅಂಗಾಂಗಳ ಅಭಿವೃದ್ಧಿಗೆ ಅತ್ಯುತ್ತಮವಾಗಿರುವ ಆಹಾರಗಳ ಪಟ್ಟಿಯನ್ನು ನೀಡುತ್ತಿದ್ದೇವೆ.
ಒಮೆಗಾ – 3 ಎಸ್
ಒಮೆಗಾ – 3 ಫ್ಯಾಟಿ ಆ್ಯಸಿಡ್ ಮಗುವಿನ ಮೆದುಳಿನ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾದುದು. ಎರಡನೇ ತ್ರೈಮಾಸಿಕದಲ್ಲಿ ಹೆಚ್ಚು ಒಮೆಗಾ – 3 ಫ್ಯಾಟಿ ಆ್ಯಸಿಡ್ ಇರುವ ಆಹಾರಗಳನ್ನು ಗರ್ಭಿಣಿಯರು ಸೇವಿಸಬೇಕಾಗುತ್ತದೆ.
ಮೀನು ಸೇವಿಸುವಾಗ ಮರ್ಕ್ಯುರಿ ಬಗ್ಗೆ ಗಮನವಿರಲಿ
ಮೀನಿನಲ್ಲಿ ಒಮೆಗಾ – 3 ಫ್ಯಾಟಿ ಆ್ಯಸಿಡ್ ಇದ್ದರೂ ಇದರಲ್ಲಿರುವ ಮರ್ಕ್ಯುರಿ ಅಂಶ ನಿಮ್ಮ ಕಂದನಿಗೆ ಒಳ್ಳೆಯದಲ್ಲ ಎಂಬುದು ನಿಮಗೆ ನೆನಪಿರಲಿ.
ಹೆಚ್ಚು ಹಣ್ಣು ತರಕಾರಿಗಳ ಸೇವನೆ

ಹಣ್ಣು ಹಾಗೂ ತರಕಾರಿಗಳಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳಿದ್ದು ಮಗುವಿನ ಸಂಪೂರ್ಣ ಆರೋಗ್ಯಕ್ಕೆ ಉತ್ತಮವಾಗಿದೆ. ಈ ಆ್ಯಂಟಿ ಆಕ್ಸಿಡೆಂಟ್ಗಳು ಮಗುವಿನ ಮೆದುಳಿನ ಕೋಶಗಳಿಗೆ ಹಾನಿಯುಂಟಾಗದಂತೆ ತಡೆಯುತ್ತದೆ. ಹಸಿರು ಸೊಪ್ಪು, ಬ್ಲುಬೆರಿ, ಟೊಮೇಟೊಗಳನ್ನು ಸೇವಿಸಿ.
ಮದ್ಯಪಾನ ಮಾಡದಿರಿ
ಗರ್ಭಾವಸ್ಥೆಯ ಸಮಯದಲ್ಲಿ ಮದ್ಯಪಾನ ಮಾಡುವುದರಿಂದ ನಿಮ್ಮ ಮಗುವಿಗೆ ಅಪಾಯ ಹೆಚ್ಚಿರುತ್ತದೆ. ಬೀರ್, ವೈನ್, ಯಾವುದೇ ಮದ್ಯಪಾನಗಳಿಂದಾಗಿ ಮಗುವಿಗೆ ಹಾನಿಯುಂಟಾಗುವ ಸಾಧ್ಯತೆಗಳಿವೆ.
ಪ್ರೊಟೀನ್ ವರ್ಧಿಸಿ
ಬೆಳೆಯುತ್ತಿರುವ ಕಂದನ ಕೋಶಗಳ ರಚನೆಗೆ ಹಾಗೂ ಹಾರ್ಮೋನ್ಗಳ ಅಭಿವೃದ್ಧಿಗೆ ಪ್ರೊಟೀನ್ ಅತ್ಯವಶ್ಯಕವಾದುದು. ಯೋಗರ್ಟ್ ಸ್ಮೂಥಿಯನ್ನು ಬೆಳಗ್ಗಿನ ಉಪಹಾರಕ್ಕೆ ಸೇವಿಸಿ.
ಕಬ್ಬಿಣದಂಶವಿರುವ ಆಹಾರ ಸೇವನೆ
ಗರ್ಭಾವಸ್ಥೆಯಲ್ಲಿ ಕಬ್ಬಿಣದ ಅಂಶಗಳು ದುಪ್ಪಟ್ಟಾಗಿರಬೇಕು. ಕಬ್ಬಿಣದ ಅಂಶವು ಮಗುವಿಗೆ ಬೇಕಾದ ಆಮ್ಲಜನಕ ಪೂರೈಕೆಯನ್ನು ಮಾಡುತ್ತದೆ. ಕಡಿಮೆ ಐಕ್ಯುವನ್ನು ಉತ್ತೇಜಿಸಲು ಕಬ್ಬಿಣದ ಅಂಶವು ಸಹಕಾರಿಯಾಗಿದೆ. ನಿಮ್ಮ ಕಬ್ಬಿಣದ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಿ. ಚಿಕನ್, ಹಸಿ ಸೊಪ್ಪುಗಳಲ್ಲಿ ಕಬ್ಬಿಣದ ಅಂಶವಿರುವುದರಿಂದ ಈ ಆಹಾರಗಳನ್ನು ಸೇವಿಸಿ.
ಅಧಿಕ ತೂಕ ಹೊಂದದಿರಿ
ನಿಮಗೆ ಹಾಗೂ ನಿಮ್ಮ ಮಗುವಿಗೆ ಬೇಕಾಗಿರುವ ಆಹಾರ ಹೀಗೆ ಇಬ್ಬರಿಗೆ ಬೇಕಾಗಿರುವ ಆಹಾರವನ್ನು ಸೇವಿಸುತ್ತಿದ್ದರೂ ತೂಕವನ್ನು ನಿರ್ವಹಿಸುವುದು ಅತ್ಯವಶ್ಯಕವಾಗಿದೆ. ಗರ್ಭಾವಸ್ಥೆಯಲ್ಲಿ ಹೆಚ್ಚುವರಿ ತೂಕವು ಹೆರಿಗೆ ಸಮಯದಲ್ಲಿ ತೊಡಕನ್ನುಂಟು ಮಾಡಬಹುದು. ಕಡಿಮೆ ತೂಕವಿದ್ದರೂ ಬೇರೆ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಸಮತೋಲಿತ ತೂಕವನ್ನು ಕಾಪಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ