ಜ್ಞಾಪಕ ಶಕ್ತಿ ವೃದ್ಧಿಗೆ ಈ ಹಣ್ಣು ತುಂಬಾ ಉಪಯೋಗಕಾರಿ

ಸೋಮವಾರ, 11 ಜೂನ್ 2018 (12:52 IST)
ಬೆಂಗಳೂರು : ಮನುಷ್ಯನಿಗೆ ವಯಸ್ಸಾದಂತೆ ಜ್ಞಾಪಕ ಶಕ್ತಿ ಕೂಡ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಅವರಿಗೆ ಈಗ ಮಾಡಿದ ಕೆಲಸಗಳು ಇನ್ನೊಂದು ಘಳಿಗೆಯಲ್ಲಿ ಮರೆತುಹೋಗಿರುತ್ತದೆ. ಈ ಸಮಸ್ಯೆಗೆ ಒಂದು ಉತ್ತಮ ಪರಿಹಾರವೆಂದರೆ ಅದು ಸೇಬು ಹಣ್ಣು.

ಸೇಬಿನ ತಿರುಳು ಹಾಗೂ ಅದರ ಸಿಪ್ಪೆಯು ಮಾನಸಿಕ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿರುವಂತದ್ದಾಗಿದೆ. ವಯಸ್ಸಾದಂತೆ ಜ್ಞಾಪಕ ಶಕ್ತಿ ಕಡಿಮೆಯಾಗುವುದಕ್ಕೆ ಸೇಬಿನ ಜ್ಯೂಸ್ ಒಳ್ಳೆಯ ಪರಿಹಾರ. ಇದು ಮೆದುಳಿನ ಕೋಶದಲ್ಲಿ ಇರುವಂತಹ ಹಾನಿಕಾರಕ ಪ್ರತಿಕ್ರಿಯಾತ್ಮಕ ಆಮ್ಲಜನಕ ಪ್ರಭೇದಗಳನ್ನು ಕಡಿಮೆ ಮಾಡಲು ನೆರವಾಗುವುದು ಮತ್ತು ಮಾನಸಿಕ ಆರೋಗ್ಯ ಉತ್ತಮಪಡಿಸುವುದು. ಸೇಬಿನಲ್ಲಿ ಅಸೆಟೈಲ್ಕೋಲಿನ್ ಎನ್ನುವ ಅಂಶವಿದ್ದು, ಇದು ವಯಸ್ಸಾದಂತೆ ಕಂಡುಬರುವಂತಹ ಅಲ್ಝೈಮೆರ್ ನ ಅಪಾಯ ಕಡಿಮೆಗೊಳಿಸುವುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ