ಚರ್ಮ ಸುಕ್ಕಾಗಿದ್ರೆ ಮನೆಯಲ್ಲಿನ ಈ ವಸ್ತುಗಳನ್ನು ಬಳಸಿ ಪರಿಹಾರ ಪಡೆಯಿರಿ

ಬುಧವಾರ, 13 ಅಕ್ಟೋಬರ್ 2021 (14:28 IST)
ಸಾಮಾನ್ಯವಾಗಿ  ವಯಸ್ಸಾಗುವ ಪ್ರತಿಯೊಬ್ಬರಿಗೂ ಚರ್ಮದ ಸುಕ್ಕುಗಳು ಉಂಟಾಗುತ್ತದೆ. ವಿಶೇಷವಾಗಿ ಮುಖ, ಕುತ್ತಿಗೆ, ಕೈಗಳು ಸೇರಿದಂತೆ ಸೂರ್ಯನಿಗೆ ಒಡ್ಡಿಕೊಂಡಿರುವ ನಮ್ಮ ದೇಹದ ಭಾಗಗಳಲ್ಲಿ ಈ ಸಮಸ್ಯೆ ಕಾಣಿಸುತ್ತದೆ.

ಹೆಚ್ಚಿನವರಿಗೆ, ಚರ್ಮದ ತೇವಾಂಶ ಮತ್ತು ದಪ್ಪ ಕಳೆದುಕೊಳ್ಳುವುದರಿಂದ ಸುಕ್ಕುಗಳು ಹೆಚ್ಚಾಗುತ್ತವೆ. ಜೆನೆಟಿಕ್ಸ್ ಕೂಡ ಸುಕ್ಕುಗಳ ಬೆಳವಣಿಗೆಯಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಆದರೆ ಸೂರ್ಯನ  ಕಿರಣಗಳು  ಮುಖ್ಯ ಕಾರಣ ಎನ್ನಲಾಗುತ್ತದೆ. ವಿಶೇಷವಾಗಿ ಧೂಮಪಾನ ಮತ್ತು ಸಮತೋಲನವಿಲ್ಲದ ಆಹಾರದಿಂದ ಸುಕ್ಕುಗಳು ಉಂಟಾಗಬಹುದು. 
ಸುಕ್ಕುಗಳಿಗೆ ನೈಸರ್ಗಿಕ ಪರಿಹಾರಗಳು
ಅಲೋವೆರಾ

ಅಲೋವೆರಾ ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುವ ಅಂಶಗಳನ್ನು ಹೊಂದಿದೆ. 2008 ರ ಅಧ್ಯಯನವೊಂದರ ಪ್ರಕಾರ  ಪ್ರತಿದಿನ ಅಲೋವೆರಾ ಅಂಶಗಳಿರುವ ಕ್ರೀಮ್ ಬಳಕೆ ಮಾಡುವುದರಿಂದ ಕೇವಲ 90 ದಿನಗಳಲ್ಲಿ ಸುಕ್ಕುಗಳು ಕಾಣಿಸಿಕೊಳ್ಳುವುದನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸಾಬೀತಾಗಿದೆ. ಮತ್ತೊಂದು ಅಧ್ಯಯನದ ಪ್ರಕಾರ, ಅಲೋವೆರಾ ಜೆಲ್ ಅನ್ನು ಚರ್ಮಕ್ಕೆ  ಹಚ್ಚುವುದು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಬಾಳೆಹಣ್ಣು ಮಾಸ್ಕ್


ಬಾಳೆಹಣ್ಣಿನಲ್ಲಿ ನೈಸರ್ಗಿಕ ಎಣ್ಣೆಗಳು ಮತ್ತು ವಿಟಮಿನ್ ಗಳಿದ್ದು ಅದು ಚರ್ಮದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ. ಬಾಳೆಹಣ್ಣಿನ ಪೇಸ್ಟ್ ಅನ್ನು ಚರ್ಮಕ್ಕೆ  ಹಚ್ಚಿದರೆ ಉತ್ತಮ ಎಂದು ಹಲವಾರು ವೈದ್ಯರು ಸಲಹೆ ನೀಡುತ್ತಾರೆ. ಬಾಳೆಹಣ್ಣಿನ ಕಾಲು ಭಾಗವನ್ನು ನಯವಾದ ಪೇಸ್ಟ್ ಆಗುವವರೆಗೆ ಮ್ಯಾಶ್ ಮಾಡಿ. ನಿಮ್ಮ ಚರ್ಮದ ಮೇಲೆ ತೆಳುವಾಗಿ ಬಾಳೆಹಣ್ಣಿನ ಪೇಸ್ಟ್ ಅನ್ನು ಹಾಕಿ ಹಾಗೂ ಅದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
ಸೂಪರ್ ಫುಡ್ಸ್
ಆರೋಗ್ಯ ಪ್ರಯೋಜನಕಾರಿ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸಾಮಾನ್ಯವಾಗಿ ಸೂಪರ್ಫುಡ್ಸ್ ಎಂದು ಕರೆಯಲಾಗುತ್ತದೆ. ಸುಕ್ಕುಗಳನ್ನು ತಡೆಯಲು ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಅನೇಕ ಸೂಪರ್ಫುಡ್ಗಳು  ಸಹಾಯ ಮಾಡುತ್ತದೆ. ಹೆಚ್ಚು ಮಾಂಸ ಮತ್ತು ಜಂಕ್ ಫುಡ್ ಗಳನ್ನು ಸೇವಿಸುವ ಮಹಿಳೆಯರಿಗಿಂತ ಹೆಚ್ಚು ಹಣ್ಣುಗಳನ್ನು ಸೇವಿಸಿದ ಮಹಿಳೆಯರಿಗೆ ಕಡಿಮೆ ಸುಕ್ಕುಗಳು ಕಾಣಿಸಿಕೊಂಡಿವೆ.  ಕೆಳಗಿನ ಅನೇಕ ಸೂಪರ್ಫುಡ್ಗಳು ಸುಕ್ಕುಗಳ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆವಕಾಡೊಗಳು
ಚಿಯಾ ಬೀಜಗಳು
ದಾಲ್ಚಿನ್ನಿ
ಮೊಟ್ಟೆಯ ಬಿಳಿಭಾಗ
ಶುಂಠಿ
ಓಟ್ ಮೀಲ್ಸಾ
ಟೊಮ್ಯಾಟೊ
ವಾಲ್ನಟ್ಸ್
ಆಲಿವ್ ಎಣ್ಣೆ

ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ ಚರ್ಮವು ಹೆಚ್ಚು ಸುಕ್ಕುಗಳಾಗದಂತೆ ತಡೆಯುತ್ತದೆ. ಆಲಿವ್ ಎಣ್ಣೆ ಮತ್ತು ಅದರ ಎಲೆಗಳು, ಚರ್ಮದ ಕಾಲಜನ್ ಮಟ್ಟವನ್ನು ಹೆಚ್ಚಿಸುವ ಅಂಶಗಳನ್ನು ಹೊಂದಿರುತ್ತವೆ. 2001 ರ ಅಧ್ಯಯನದ ಪ್ರಕಾರ, ಆಲಿವ್ ಎಣ್ಣೆಯಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿದ ಜನರಲ್ಲಿ ಸುಕ್ಕುಗಳು ಕಡಿಮೆ ಎಂಬುದು ಸಾಬೀತಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ