ಇತ್ತೀಚಿನ ದಿನಗಳಲ್ಲಿ ಬಹುತೇಕ ಹೆಣ್ಣು ಮಕ್ಕಳು ಪಿಸಿಒಡಿ ಸಮಸ್ಯೆಯನ್ನು ಹೊಂದಿರುತ್ತಾರೆ. ಈ ಪಿಸಿಒಡಿ ಬಂಜೆತನಕ್ಕೆ ಕಾರಣವಾಗಬಹುದು. ಪಿಸಿಒಡಿ ಎಂದರೆ ಪಾಲಿಸಿಸ್ಟಿಕ್ ಓವರಿ ಡಿಸಾರ್ಡರ್ ಎಂದರ್ಥ. ಹಾರ್ಮೋನ್ಗಳ ಅಸಮತೋಲನದಿಂದ ಪಿಸಿಒಡಿ ಸಮಸ್ಯೆ ಉಂಟಾಗುತ್ತದೆ.
Photo Courtesy: Google
ಸಾಮಾನ್ಯವಾಗಿ ಈ ಸಮಸ್ಯೆ 30 ವರ್ಷದ ಆಸುಪಾಸಿನಲ್ಲಿ ಕಂಡುಬರುತ್ತಿತ್ತು. ಆದರೆ ಇತ್ತೀಚಿಗೆ 20 ವಯಸ್ಸಿನ ಹೆಣ್ಣು ಮಕ್ಕಳಿಗೂ ಪಿಸಿಒಡಿ ಸಮಸ್ಯೆ ಎದುರಾಗುತ್ತಿದೆ.
ಪ್ರತಿ ತಿಂಗಳು ಮುಟ್ಟಾಗದಿದ್ದರೆ ಅದಕ್ಕೆ ಮುಖ್ಯ ಕಾರಣ ಪಿಸಿಒಡಿ ಆಗಿರುತ್ತದೆ. ಪಿಸಿಒಡಿ ಸಮಸ್ಯೆಯ ಪ್ರಮುಖ ಲಕ್ಷಣಗಳು ಇಲ್ಲಿವೆ. ಈ ಎಲ್ಲಾ ಲಕ್ಷಣಗಳು ಕಂಡುಬಂದರೆ ಪಿಸಿಒಡಿ ಸಮಸ್ಯೆ ಇದೆ ಎಂದರ್ಥ.
* ದೇಹದ ತೂಕ ಹೆಚ್ಚಳ
* ಮುಟ್ಟಾದಾಗ ವಿಪರೀತ ರಕ್ತಸ್ರಾವ ಆಗುವುದು
* ಮುಖದಲ್ಲಿ ಮೊಡವೆಗಳು ಮೂಡುತ್ತವೆ
* ದೇಹದಲ್ಲಿ ಅತಿಯಾಗಿ ಕೂದಲು ಬೆಳೆಯುವುದು
* ತಲೆಯ ಕೂದಲು ಹೆಚ್ಚು ಉದುರುವುದು ಪಿಸಿಒಡಿ ಸಮಸ್ಯೆಗೆ ಪರಿಹಾರ * ವ್ಯಾಯಾಮ ಅಥವಾ ಯೋಗ
ಪಿಸಿಒಡಿ ಸಮಸ್ಯೆ ಇರುವವರು ವ್ಯಾಯಾಮ ಅಥವಾ ಯೋಗ ಮಾಡಬೇಕು. ದಿನಕ್ಕೆ ಕನಿಷ್ಠ 30 ನಿಮಿಷ ಯೋಗ ಮಾಡಬೇಕು. ಪಿಸಿಒಡಿ ಸಮಸ್ಯೆ ಇರರುವವರು ಸೂರ್ಯ ನಮಸ್ಕಾರ ಮಾಡುವುದು ಒಳಿತು. * ಅಧಿಕ ಮಾತ್ರೆ ಸೇವಿಸಬಾರದು
ತಲೆನೋವು ಸಹಜವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಹಲವು ಕಾರಣವಿರಬಹುದು. ತಲೆನೋವು ಬಂದಾಗೆಲ್ಲ ಮಾತ್ರೆ ತಿನ್ನುವ ಅಭ್ಯಾಸವಿರುತ್ತದೆ. ಆದರೆ ಇದು ಒಳ್ಳೆಯದಲ್ಲ. ಪದೇ ಪದೇ ಮಾತ್ರೆಗಳನ್ನು ಸೇವಿಸಿದರೆ ದೇಹದಲ್ಲಿರುವ ಹಾರ್ಮೋನ್ಗಳು ಅಸಮತೋಲನವಾಗುತ್ತದೆ. * ಆಹಾರ ಪದ್ಧತಿ
ಪಿಸಿಓಡಿ ಸಮಸ್ಯೆಗೆ ಕೆಟ್ಟ ಆಹಾರ ಪದ್ಧತಿಯೂ ಕಾರಣವಾಗಿರುತ್ತದೆ. ಆರೋಗ್ಯಕರ ಆಹಾರ ಸೇವಿಸಬೇಕು. ಜಂಕ್ ಫುಡ್ಗಳಿಂದ ದೂರವಿಬೇಕು. ಪ್ಲಾಸ್ಟಿಕ್ನಲ್ಲಿ ಶೇಖರಣೆಯಾಗಿರುವ ಆಹಾರವನ್ನು ಸೇವಿಸಬಾರದು. ಉತ್ತಮ ಆಹಾರ ಸೇವಿಸದೆ ಇರುವುದು ಪಿಸಿಒಡಿ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತದೆ. ಹೆಚ್ಚು ಎಣ್ಣೆಯಿಂದ ತಯಾರಿಸಿದ ಆಹಾರವನ್ನು ತಿನ್ನಬಾರದು. * ತರಕಾರಿ ಮತ್ತು ಹಣ್ಣು ಸೇವಿಸಿ
ಹಸಿ ತರಕಾರಿ, ಸೊಪ್ಪಿನ ಪಲ್ಯ, ಕಾಳು ಪಲ್ಯ ಊಟದ ಜೊತೆ ಇರಬೇಕು. ಹೆಚ್ಚು ಹಣ್ಣುಗಳನ್ನು ಆಗಾಗ ಸೇವಿಸಬೇಕು.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಆಕಳು ತುಪ್ಪ ಸೇವಿಸಬೇಕು. ಇದರಿಂದ ಪಿಸಿಓಡಿ ಸಮಸ್ಯೆಯಿಂದ ಮುಕ್ತವಾಗಬಹುದು. * ಮಣ್ಣಿನ ಪಾತ್ರೆ ಬಳಸಿ
ತಿನ್ನುವ ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ಇಡುವುದನ್ನು ತಪ್ಪಿಸಿ. ಆದಷ್ಟೂ ಸ್ಟೀಲ್ ಅಥವಾ ಗಾಜಿನ ಡಬ್ಬಗಳಲ್ಲಿ ಶೇಖರಿಸಿ. ಇದರ ಜೊತೆಗೆ ಅಡುಗೆಗೆ ಹೆಚ್ಚು ಮಣ್ಣಿನ ಪಾತ್ರೆಗಳನ್ನು ಬಳಸಿ. ಮಣ್ಣಿನ ಪಾತ್ರೆಗಳಲ್ಲಿ ತಯಾರಿಸಿದ ಅಡುಗೆ ನಾಲಿಗೆಗೆ ರುಚಿ ನೀಡುತ್ತದೆ. ಹಾಗೇ, ಅರೋಗ್ಯಕ್ಕೂ ಒಳ್ಳೆಯದು. * ಒತ್ತಡದಿಂದ ದೂರವಿರಿ
ಪಿಸಿಒಡಿಗೆ ಮುಖ್ಯ ಕಾರಣ ಹಾರ್ಮೋನ್ಗಳ ಅಸಮತೋಲನ. ಹಾರ್ಮೋನ್ಗಳ ಅಸಮತೋಲನಕ್ಕೆ ಒತ್ತಡವೂ ಕಾರಣವಾಗುತ್ತದೆ. ಹೀಗಾಗಿ ಸಣ್ಣ ಪುಣ್ಣ ವಿಚಾರಗಳ ಬಗ್ಗೆ ಹೆಚ್ಚು ಟೆನ್ಷನ್ ಆಗಬಾರದು.