ದಿನಾ ಬೆಳಗ್ಗೆ ಎದ್ದು ಹೀಗೆ ಮಾಡಿ, ಕಿಡ್ನಿಯಲ್ಲಿ ಕಲ್ಲು ಇದ್ದರೆ ತಾನಾಗೇ ಕರಗಿ ಹೋಗುತ್ತದೆ!

ಸೋಮವಾರ, 20 ಸೆಪ್ಟಂಬರ್ 2021 (07:38 IST)
Kidney Stones : ಮೂತ್ರಪಿಂಡದಲ್ಲಿ ಕಲ್ಲು ಉಂಟಾಗೋದು ಇತ್ತೀಚೆಗಂತೂ ಸರ್ವೇ ಸಾಧಾರಣವಾದ ಸಮಸ್ಯೆ. ಗಂಡಸರು ಹೆಂಗಸರು ಎನ್ನದೇ ಎಲ್ಲರನ್ನೂ ಈ ಸಮಸ್ಯೆ ಕಾಡುತ್ತದೆ.

ವಿಪರೀತ ನೋವು ಕೊಡುವ ಈ ಸಮಸ್ಯೆಗೆ ಪರಿಹಾರಗಳು ಸಾಕಷ್ಟಿವೆ. ಬೊಜ್ಜು, ಬಿಪಿ, ಸೂಕ್ತ ಪ್ರಮಾಣದಲ್ಲಿ ನೀರು ಸೇವಿಸದೆ ಇರುವುದು ಸೇರಿದಂತೆ ನಾನಾ ಜೀವನಶೈಲಿ ಸಂಬಂಧಿತ ತಪ್ಪುಗಳಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಉತ್ಪತ್ತಿಯಾಗುತ್ತವೆ. ಆದರೆ ಅವುಗಳಿಗೆ ಬಹಳ ಉಪಯುಕ್ತ ಪರಿಹಾರಗಳೂ ಇವೆ.
ಕಿಡ್ನಿಯಲ್ಲಿನ ಕಲ್ಲುಗಳನ್ನು ತೆಗೆಯಲು ವೈದ್ಯಕೀಯವಾಗಿ ಸಾಕಷ್ಟು ಪರಿಹಾರಗಳು ಇವೆ. ಆದರೆ ಕಲ್ಲುಗಳು ಸಣ್ಣದಿದ್ದಾಗಲೇ ನೈಸರ್ಗಿಕ ವಿಧಾನಗಳಿಂದ ಅವುಗಳನ್ನು ಕರಗಿಸುವ ನಾನಾ ಮಾರ್ಗಗಳೂ ಇವೆ.

ದಿನಾ ಮುಂಜಾನೆ ಒಂದು ಲೋಟ ಬೆಚ್ಚಗಿನ ನೀರಿಗೆ ಎರಡು ಚಮಚ ನಿಂಬೆಹಣ್ಣಿನ ರಸ ಬೆರೆಸಿ ನಂತರ ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ಬೆರೆಸಿ. ಇದನ್ನು ಕೆಲವು ದಿನ ಹಲ್ಲುಜ್ಜಿದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಈ ಮಿಶ್ರಣ ಒಂಟೆಯ ಕೊಬ್ಬನ್ನೂ ಕರಗಿಸುವಷ್ಟು ಶಕ್ತಿಶಾಲಿಯಂತೆ, ಮೂತ್ರಿಪಿಂಡದ ಕಲ್ಲುಗಳು ಯಾವ ಲೆಕ್ಕ ಎನ್ನುತ್ತಾರೆ ತಜ್ಞರು.

ಒಂದು ಲೋಟ ಕಲ್ಲಂಗಡಿ ರಸಕ್ಕೆ ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ. ಈ ಮಿಶ್ರಣವನ್ನು ರಾತ್ರಿಯಿಡೀ ಹಾಗೇ ಇರಲು ಬಿಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಕೆಲವು ದಿನ ನಿರಂತರವಾಗಿ ಇದನ್ನು ಸೇವಿಸಿದರೆ ಕಿಡ್ನಿಯಲ್ಲಿನ ಕಲ್ಲು ತಾನಾಗೇ ಕರಗಿ ಹೋಗುತ್ತದೆ.

ಎಳನೀರು ಕೂಡಾ ಕಿಡ್ನಿಯಲ್ಲಿನ ಕಲ್ಲುಗಳಿಗೆ ರಾಮಬಾಣ. ಒಂದು ಲೋಟ ಎಳನೀರಿಗೆ ಎರಡು ಚಮಚ ನಿಂಬೆರಸ ಬೆರೆಸಿ ಕುಡಿಯಿರಿ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಇದನ್ನು ತಪ್ಪದೇ ಮಾಡಿದರೆ ಕಲ್ಲು ಸರಾಗವಾಗಿ ಕರಗುತ್ತದೆ.
ಎಳನೀರು ಮತ್ತು ನಿಂಬೆರಸದ ಮಿಶ್ರಣ ಮೂತ್ರಪಿಂಡದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಇದು ಕಲ್ಲು ಕರಗಿಸುವ ಜೊತೆಗೆ ಮೂತ್ರಪಿಂಡದ ಆರೋಗ್ಯಕ್ಕೂ ಸಹಕಾರಿಯಾಗಿರುತ್ತದೆ. ಅಷ್ಟೇ ಅಲ್ಲ, ತಜ್ಞರ ಪ್ರಕಾರ ಇದು ಚರ್ಮದ ಆರೋಗ್ಯಕ್ಕೂ ಒಳ್ಳೆಯದಂತೆ.
ಮೂತ್ರಪಿಂಡದ ಕಲ್ಲುಗಳಿಗೆ ಎಲ್ಲಕ್ಕಿಂತ ಉತ್ತಮ ಔಷಧ ನೀರು. ಉತ್ತಮ ಪ್ರಮಾಣದಲ್ಲಿ ನೀರು ಕುಡಿದರೆ ಕಲ್ಲು ಉತ್ಪತ್ತಿಯೇ ಆಗುವುದಿಲ್ಲ ಎನ್ನುತ್ತಾರೆ ವೈದ್ಯರು. ದೇಹದ ಆರೋಗ್ಯಕ್ಕೆ ನೀರು ಬಹಳ ಮುಖ್ಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ