ಮನಶಾಂತಿಗಾಗಿ ಸಲಹೆಗಳು

ಶುಕ್ರವಾರ, 21 ನವೆಂಬರ್ 2014 (15:16 IST)
ಭಾನುವಾರ ಸ್ಪಲ್ಪ ಹೆಚ್ಚು ನಿದ್ರಿಸಿ. ನಿದ್ರೆಯಿಂದ ಮನಸ್ಸಿನ ಒತ್ತಡ ನಿವಾರಣೆಯಾಗುತ್ತದೆ. 
ಕಾಮಿಕ್ಸ್‌ ಓದುವುದರಿಂದ ಅದ್ಭುತ ಕಲ್ಪನಾ ಲೋಕಕ್ಕೆ ತೆರಳುವುದರೊಂದಿಗೆ ಬಾಲ್ಯದ ನೆನಪುಗಳೂ ಮರುಕಳಿಸುತ್ತವೆ.
ನಿಮ್ಮ ಮನಸ್ಸಿನ ಭಾವನೆಗಳನ್ನು ಹೊರಹಾಕಲು ಕವನ ರಚಿಸಿ. ಕವನ ರಚನೆ ಚಿಂತನೆ ಹಾಗೂ ಭಾವನೆಗಳನ್ನು ಹೊರಹೊಮ್ಮಿಸಲು ಸೂಕ್ತ ಮಾರ್ಗ.
"ನೀವು ಮಾನಸಿಕ ಒತ್ತಡದಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಸುಗಂಧ ಭರಿತ ಕ್ಯಾಂಡಲ್‌ಗಳನ್ನು ಹಚ್ಚುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
"
 
"ಮದ್ಯಪಾನದಿಂದ ಕ್ಷಣ ಕಾಲ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ. ಆದರೆ ಈ ಚಟಕ್ಕೆ ದಾಸರಾದರೆ ನೆಮ್ಮದಿಯನ್ನೇ ಹಾಳು ಮಾಡುತ್ತದೆ.
"
"ಅಡಿಗೆ ಮನೆಯಲ್ಲಿರುವ ಸಿಂಕ್‌ ಹಾಗೂ ವಾಶ್‌ ಬೇಸಿನ್‌ ತೊಳೆಯುವುದರಿಂದ ಮನೆಯೂ ಸ್ವಚ್ಛವಾಗುತ್ತದೆ. ಮನಸ್ಸಿಗೂ ನೆಮ್ಮದಿ ದೊರೆಯುತ್ತದೆ.
"
"ಸಮುದ್ರ  ತೀರಕ್ಕೆ ಹೋಗಿ ಅಗಾಧವಾಗಿರುವ ಜಲರಾಶಿಯನ್ನು ನೋಡಿ. ಇದರಿಂದ ಜೀವನದ ಉತ್ಸಾಹ ಇಮ್ಮಡಿಸುತ್ತದೆ. 
"

ವೆಬ್ದುನಿಯಾವನ್ನು ಓದಿ