ಬೆಂಗಳೂರು : ಮೆಂತ್ಯ ಬೆನ್ನು ನೋವು ಮತ್ತು ಸೊಂಟನೋವಿಗೆ ಪವರ್ ಪುಲ್ ಮನೆಮದ್ದು. ಆದರೆ ಇದು ಕಹಿ ಇರುವುದರಿಂದ ಹಾಗೇ ತಿನ್ನಲು ಸಾಧ್ಯವಾಗದಿದ್ದರೆ ಅದರಿಂದ ಸಿಹಿಯಾದ ಲೇಹವನ್ನು ತಯಾರಿಸಿ ತಿನ್ನಿ.
ಬೇಕಾಗುವ ಸಾಮಾಗ್ರಿಗಳು :
ಮೆಂತ್ಯ ¼ ಕಪ್, ತುಪ್ಪ ¼ ಕಪ್, ಬೆಲ್ಲ ½ ಕಪ್, ನೀರು 1¼
ಮಾಡುವ ವಿಧಾನ:
ರಾತ್ರಿ ಮೆಂತ್ಯವನ್ನು ನೆನೆಹಾಕಿ ಬೆಳಿಗ್ಗೆ ಅದನ್ನು ಮಿಕ್ಸಿ ಜಾರ್ ಗೆ ಹಾಕಿ ನೀರು ಹಾಕಿ ನುಣ‍್ಣಗೆ ರುಬ್ಬಿಕೊಳ್ಳಿ. ಬಳಿಕ ಒಂದು ಬಾಣಲೆಯಲ್ಲಿ ಈ ರುಬ್ಬಿದ ಮೆಂತ್ಯ ಪೇಸ್ಟ್ ಹಾಗೂ ಸ್ವಲ್ಪ ನೀರು ಹಾಕಿ 2-3 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ. ನಂತರ ತುಪ್ಪ ಹಾಕಿ ತಳ ಹಿಡಿಯದಂತೆ ಕಲಸಿ. ಬಳಿಕ ಬೆಲ್ಲವನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಹೊತ್ತು ಬೇಯಿಸಿದರೆ ಮೆಂತ್ಯ ಲೇಹ ರೆಡಿ.